ಸೀರೆಯುಟ್ಟ ಮೀರಾರನ್ನು ಅವಮಾನಿಸಿದ ಯುಎಸ್

ಮಿಸಿಸಿಪ್ಪಿ ಸ್ಟೇಟ್ ಯೂನಿವರ್ಸಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಬಾಲ್ಟಿಮೋರ್ ಗೆ ಹೊರಟ್ಟಿದ್ದ ಮೀರಾ ಅವರು ಇಲ್ಲಿನ ಜಾಕ್ಸನ್ ಎವರ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಅವರನ್ನು ಅಪಮಾನಿಸಲಾಗಿದೆ.
ಸೀರೆ ಧರಿಸಿದ್ದೇ ಕಾರಣವೇ?: ಸೀರೆ ಧರಿಸಿದ್ದ ಮೀರಾ ಅವರನ್ನು ಅತಿಗಣ್ಯರ ಕೊಠಡಿಗೆ ಕರೆದೊಯ್ದು ಕೂಲಂಕುಷವಾಗಿ ದೈಹಿಕ ತಪಾಸಣೆಗೆ ಒಳಪಡಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೂರ್ತಿ ದೇಹ ಸ್ಕ್ಯಾನ್ ಮಾಡುವ ಯಂತ್ರವನ್ನು ಈ ವಿಮಾನ ನಿಲ್ದಾಣ ಹೊಂದಿಲ್ಲ. ಅಲ್ಲದೆ, ಆಕೆ ಧರಿಸಿದ್ದ ಉಡುಪು ಅನುಮಾನಕ್ಕೆ ಕಾರಣವಾಯಿತು ಹಾಗಾಗಿ ತಪಾಸಣೆಗೆ ಒಳಪಡಿಸಬೇಕಾಯಿತು ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಎಂ ಕೃಷ್ಣ ಅವರು ಈ ಪ್ರಕರಣ ಕುರಿತಂತೆ ಅಮೆರಿಕದ ಸ್ಪಷ್ಟನೆ ಕೇಳಿದ್ದಾರೆ. ಇಂತಹ ಘಟನೆ ಭಾರತದ ಪಾಲಿಗೆ ಅಪಮಾನಕರ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications