ಬೆಂಗಳೂರಿಗರನ್ನು ಕೊರೆಯುತ್ತಿರುವ ಮಾಗಿ ಚಳಿ

ಬೆಂಗಳೂರು, ಡಿ.7: ಉದ್ಯಾನ ನಗರಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಚಳಿಯ ತೀವ್ರತೆ ಹೆಚ್ಚುತ್ತಿದ್ದು, ತಣ್ಣನೆಯ ಗಾಳಿಯ ಹೊಡೆತಕ್ಕೆ ಹೆದರಿದ ಜನ, ಸ್ವೆಟ್ಟರು, ಜರ್ಕಿನ್, ಶಾಲುಗಳಿಗೆ ಮೊರೆ ಹೋಗಿ ಕೊರೆಯುವ ಚಳಿಯನ್ನು ಶಪಿಸುತ್ತಿದ್ದಾರೆ. ಹಿರಿಯ ನಾಗರೀಕರು ಮಾತ್ರ ದಶಕಗಳ ಹಿಂದೆ ಬೆಂಗಳೂರಿನ ವಾತಾವರಣ ಇದ್ದಿದ್ದೇ ಹೀಗೆ ಎಂದು ನೆನಪಿಂಗಳಕ್ಕೆ ಜಾರುತ್ತಿದ್ದಾರೆ. ಇಂದು ಕೊಂಚ ಬಿಸಿಲು ಕಾಣಿಸಿಕೊಂಡರೂ ಚಳಿಯ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ.

ಬೆಂಗಳೂರಿನಲ್ಲಿ ಸೋಮವಾರ ದಿನದ ಉಷ್ಣಾಂಶ 16.8 ಡಿ.ಸೆ ಇತ್ತು. ಆದರೆ, ಗರಿಷ್ಠ ಉಷ್ಣಾಂಶ 22 ಡಿ.ಸೆ ದಾಟಲಿಲ್ಲ. ಸೂರ್ಯ ಭಗವಾನ್ ದರ್ಶನವಂತೂ ಇಲ್ಲವೇ ಇಲ್ಲ. ಇನ್ನೆರಡು ಮೂರು ದಿನಗಳ ಕಾಲ ಸೂರ್ಯನಿಗೆ ಫುಲ್ ರೆಸ್ಟ್, ಚಳಿ ಜೊತೆಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಂಭವ ಕೂಡಾ ಹೆಚ್ಚು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಡಿಸೆಂಬರ್ ತಿಂಗಳಲ್ಲಿ ನಗರದಲ್ಲಿ ಸಾಮಾನ್ಯವಾಗಿ ದಿನದ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 17.6 ಡಿ.ಸೆ ಇರುತ್ತದೆ. ಜನವರಿ ವೇಳೆಗೆ ಉಷ್ಣಾಂಶವು 13 ಡಿ.ಸೆ ಗಿಂತಲೂ ಕಡಿಮೆಯಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ನವೆಂಬರ್‌ನಿಂದ ಫೆಬ್ರುವರಿ ಅಂತ್ಯದವರೆಗೆ ಚಳಿಗಾಲ ಇರುತ್ತದೆ. ಚಳಿಯ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಮಾರ್ಚ್‌ವರೆಗೆ ಕಾಯಲೇಬೇಕು.

ತಮಿಳುನಾಡು ಮಳೆ ಎಫೆಕ್ಟ್?: ತಮಿಳುನಾಡಿನ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಎರಡು ದಿನಗಳಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದು ಉತ್ತರ ದಿಕ್ಕಿಗೆ ಚಲಿಸುವ ಸಾಧ್ಯತೆ ಇರುವುದರಿಂದ ದಕ್ಷಿಣ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪುಟ್ಟಣ್ಣ ಹೇಳಿದರು.

ರಾಯಚೂರಿಗೂ ಚಳಿ ತಟ್ಟಲಿದೆ: ಆದರೂ ಬೆಂಗಳೂರು, ಕೋಲಾರ, ತುಮಕೂರಿನಲ್ಲಿ ಇನ್ನೂ ಎರಡು ದಿನ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಚಳಿಗಾಲದಲ್ಲಿ ರಾಯಚೂರು, ಗುಲ್ಬರ್ಗದಲ್ಲಿ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಬೆಂಗಳೂರು ಸುತ್ತಮುತ್ತ ಅಧಿಕ ಮಂಜು ಬೀಳುವುದರಿಂದ ನಗರದ ಹೊರ ವಲಯದಲ್ಲಿ ಚಳಿ ಹೆಚ್ಚಿರುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+