ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 27, 28ರಂದು ಕರ್ನಾಟಕ ಸಿಇಟಿ : ಆಚಾರ್ಯ

By Mahesh
|
Google Oneindia Kannada News

Minister VS Acharya
ಬೆಂಗಳೂರು, ಡಿ.3: ವೃತ್ತಿ ಶಿಕ್ಷಣ ಕೋರ್ಸ್‌ಗಳ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆಯ ಬಗ್ಗೆ ಚರ್ಚಿಸಲು ಕರೆದಿದ್ದ ಸರ್ಕಾರ ಮತ್ತು 'ಕಾಮೆಡ್-ಕೆ" ಸಂಯೋಜಿತ ಕಾಲೇಜುಗಳ ಸಭೆ ಒಮ್ಮತದ ತೀರ್ಮಾನಕ್ಕೆ ಬರಲು ವಿಫಲವಾಗಿದೆ. ಮುಂದಿನ ಏಪ್ರಿಲ್ 27 ಮತ್ತು 28ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಸಭೆ ತೀರ್ಮಾನಿಸಿತು ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆನ್‌ಲೈನ್ ಅರ್ಜಿ ಸಲ್ಲಿಕೆ : ವೃತ್ತಿ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಈ ವರ್ಷದಿಂದ ಆನ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು ಎಂದು ಆಚಾರ್ಯ ತಿಳಿಸಿದರು. ಈ ವರ್ಷದಿಂದ ಬೆಳಗಾವಿ ಮತ್ತು ಚಿತ್ರದುರ್ಗದಲ್ಲೂ ಸಿಇಟಿ ಕೌನ್ಸೆಲಿಂಗ್ ಘಟಕ ಆರಂಭಿಸಲಾಗುವುದು ಎಂದರು.

'ಸರ್ವಸಮ್ಮತ ಒಪ್ಪಂದಕ್ಕೆ ಪ್ರತಿವರ್ಷವೂ ಸುಪ್ರೀಂ ಕೋರ್ಟ್‌ನಿಂದ ಒಪ್ಪಿಗೆ ಪಡೆಯುತ್ತಿದ್ದೇವೆ. ಆದರೆ ಈ ಬಾರಿ ಸ್ವಲ್ಪ ವಿಳಂಬವಾಗಿದೆ. ಕಾಮೆಡ್ ಕೆ ಇನ್ನೊಂದು ವಾರದಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ, ಮುಂದಿನ ವರ್ಷ ಕೂಡ ಅದರ ಆಧಾರದಲ್ಲಿಯೇ ಸೀಟು ಹಂಚಿಕೆ ನಡೆಸಲಿದ್ದೇವೆ" ಎಂದರು.

ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ 538 ಸರ್ಕಾರಿ ಸೀಟುಗಳು, ಅನುದಾನಿತ ಕಾಲೇಜುಗಳಲ್ಲಿ 17, ಅನುದಾನರಹಿತ ಕಾಲೇಜುಗಳಲ್ಲಿ 7,093 ಸೀಟುಗಳು ಮತ್ತು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ 419 ಸೀಟುಗಳು ಬಾಕಿ ಉಳಿದಿದ್ದವು" ಎಂದು ಆಚಾರ್ಯ ಮಾಹಿತಿ ನೀಡಿದರು.

English summary
Karnataka CET Entrance examination 2011 dates announced. Higher Education Minister Dr V S Acharya announced on Wednesday that Karnataka Examinations Authority (KEA) is introducing online application for CET from 2011. Exams will be held on April 27, 28. But KEA couldn"t able to compromise with COMEDK in seat matrix related issues Minister said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X