ಬಂಗಾರದ ಬೆಲೆ 10 ಗ್ರಾಂಗೆ 21 ಸಾವಿರ ರು.
ನವದೆಹಲಿ,
ಡಿ. 2 : ಬಡವರಿಂದ ಬಲು ದೂರ ಸಾಗಿರುವ ಬಂಗಾರದ ಬೆಲೆ ಇದೀಗ ಶ್ರೀಮಂತರಿಗೂ ಬಿಸಿ ಮುಟ್ಟಿಸತೊಡಗಿದೆ. ಮದುವೆ ಸೀಸನ್ ಇದಾಗಿದ್ದರಿಂದ ಬಂಗಾರಕ್ಕೆ ಚಿನ್ನದಂಥ ಬೆಲೆ ತಂದುಕೊಟ್ಟಿದೆ ಎಂದರೆ ಸುಳ್ಳಲ್ಲ. ನವದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 21 ಸಾವಿರ ರುಪಾಯಿಗೆ ಬಂದು ನಿಂತಿದೆ. ಇದು ಎಲ್ಲ ಕಾಲಕ್ಕೂ ದಾಖಲೆಯ ಬೆಲೆ. id="toptextpromo">ಬೆಳ್ಳಿಯ
ಬೆಲೆಯೂ ಬಂಗಾರದ ಹಾದಿಯಲ್ಲೇ ಸಾಗುತ್ತಿದ್ದು, ಪ್ರತಿ ಕೆಜಿ ಬೆಳ್ಳಿಗೆ 43,950 ರುಪಾಯಿ ದಾಖಲಾಗಿದೆ. ಉದ್ಯಮ ವಲಯ ಮತ್ತು ನಾಣ್ಯ ತಯಾರಿಕರಿಂದ ಭಾರಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಬೆಳ್ಳಿಗೂ ದಾಖಲೆ ಬೆಲೆ ಬಂದಿದೆ. id='are-slot-1' class='oiad oi-axt oiadv'> id='top-searched-articles'>ಶೇ.99.9
ರಷ್ಟು ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 200 ರುಪಾಯಿಗಳಷ್ಟು ಏರಿಕೆಯಾಗಿದೆ. ಹೀಗಾಗಿ ಚಿನ್ನಗ ಬೆಲೆ 21,020 ರುಪಾಯಿಗಳಷ್ಟು ದಾಖಲಾಗಿದೆ. ಚಿನಿವಾರ ಪೇಟೆಯಲ್ಲಿನ ಬೇಡಿಕೆಯಿಂದ ಚಿನ್ನದ ಬೆಲೆ ಮತ್ತಷ್ಟು ಮುಗಿಲು ಮುಟ್ಟತೊಡಗಿದೆ ಎಂದು ಚಿನಿವಾರ ಪೇಟೆ ವಿಶ್ಲೇಷಕರು ಹೇಳುತ್ತಾರೆ.











Click it and Unblock the Notifications