ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಲರಿ ರಾಜೀನಾಮೆಗೆ ವಿಕಿಲೀಕ್ಸ್ ಅಸ್ಸಂಜೆ ಆಗ್ರಹ

By Mahesh
|
Google Oneindia Kannada News

Hillary Cliton
ನ್ಯೂಯಾರ್ಕ್, ಡಿ.1: ರಹಸ್ಯ ದಾಖಲೆಗಳನ್ನು ಮಾಹಿತಿ ಬಹಿರಂಗಗೊಳಿಸಿ ಅಮೆರಿಕದ ಆಡಳಿತವನ್ನೇ ಆಲ್ಲಾಡಿಸುತ್ತಿರುವ ವಿಕಿಲೀಕ್ಸ್ ನ ಸ್ಥಾಪಕ ಜುಲಿಯನ್ ಅಸ್ಸಂಜೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಟೈಮ್ ಮ್ಯಾಗಜೀನ್ ಗೆ ಮಂಗಳವಾರ ನೀಡಿದ ಸಂದರ್ಶನದಲ್ಲಿ ಯುಎನ್ ಸಂಸ್ಥೆ ಮೇಲೆ ಬೇಹುಗಾರಿಕೆ ನಡೆಸಿದ ಹಿಲರಿ ಮೊದಲು ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ.

ವಿಕಿಲೀಕ್ಸ್ ಬಹಿರಂಗಗೊಳಿಸಿದ ಮಾಹಿತಿಯಂತೆ ಹಿಲರಿ, ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿನ ಭಾರತೀಯ ರಾಜ ತಂತ್ರಜ್ಞರ ಮೇಲೆ ಕಣ್ಣಿಡುವಂತೆ ತಮ್ಮ ಬೇಹುಗಾರಿಕಾ ಪ್ರತಿನಿಧಿಗಳಿಗೆ ಹೇಳಿದ್ದರು. ಅಲ್ಲದೆ, ವಿಶ್ವಸಂಸ್ಥೆ ಅಧ್ಯಕ್ಷ ಬಾನ್ ಕಿ ಮೂನ್ ಅವರ ಬಯೋಮೆಟ್ರಿಕ್ ಮಾಹಿತಿಗಳನ್ನು ಸಂಗ್ರಹಿಸುವಂತೆ ಹಿಲರಿ ಸೂಚಿಸಿದ್ದರು.ಇದರ ಜೊತೆಗೆ, ಭಾರತವು ವಿಶ್ವ ಸಂಸ್ಥೆಯ ಭದ್ರತಾ ಪಡೆಯ ಖಾಯಂ ಸದಸ್ಯತ್ವಕ್ಕೆ 'ಸ್ವಯಂ ಘೋಷಿತ ಅಭ್ಯರ್ಥಿಯಾಗಿದೆ" ಎಂದು ಹಿಲರಿ ಕ್ಲಿಂಟನ್ ವರ್ಣಿಸಿದ್ದುದನ್ನು ವಿಕಿಲೀಕ್ಸ್ ಬಹಿರಂಗ ಪಡಿಸಿತ್ತು.

ಆದರೆ, ವಿಕಿಲೀಕ್ಸ್ ನ ಮಾಹಿತಿಯನ್ನು ಅಲ್ಲಗೆಳೆದಿರುವ ಹಿಲರಿ, ಮಾಹಿತಿ ಬಹಿರಂಗ ಮಾಡುವುದರಿಂದ ಲಕ್ಷಾಂತರ ಜನರು ಅಪಾಯ ಎದುರಿಸಬೇಕಾಗುತ್ತದೆ. ಇದು ಅಂತಾರಾಷ್ಟ್ರೀಯ ಸಮುದಾಯದ ಮೇಲಿನ ದಾಳಿ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೂ ಮುನ್ನ ಅಮೆರಿಕವು ಭಾರತದ ಹೆಚ್ಚಿನ ಜಾಗತಿಕ ನಾಯಕತ್ವವನ್ನು ಸ್ವಾಗತಿಸುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಟ, ಸಾಗರ ಪ್ರಾಂತ್ಯ ರಕ್ಷಣೆ ಇತ್ಯಾದಿ ಸಮಾನ ಸವಾಲುಗಳ ವಿರುದ್ಧ ಭಾರತ ಅನುಸರಿಸುತ್ತಿರುವ ಕ್ರಮ ಹಾಗೂ ಅದರ ವೌಲ್ಯಗಳಿಗೂ ತಮ್ಮ ಸ್ವಾಗತವಿದೆ. ತಾವು ವಿಶ್ವದಲ್ಲಿ ಪ್ರಜಾಸತ್ತೆ, ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ಅಮೆರಿಕದ ರಾಯಭಾರಿ ತಿಮೋತಿ ಜೆ ರೋಮರ್ ಹೇಳಿದ್ದರು.

English summary
The whistle-blowing website WikiLeaks founder Julian Assange urged the United States Secretary of State, Hillary Clinton, to resign from the post. The diplomatic cables published by WikiLeaks exposed that Hillary Clinton asked US Officials to spy on United Nations leadership and to get biometric information on UN Secretary General Ban Ki-moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X