ಬಿಜೆಪಿ ಹೈ ಕಮಾಂಡ್ ಗೆ ಯಡ್ಡಿ 500 ಕೋಟಿ ಲಂಚ
ಮಂಗಳೂರು,
ಡಿ.1 : ಬಿಎಸ್ ಯಡಿಯೂರಪ್ಪ ತನ್ನ ಪಟ್ಟ ಉಳಿಸಿಕೊಳ್ಳಲು ಬಿಜೆಪಿ ಕೇಂದ್ರೀಯ ನಾಯಕರಿಗೆ 500 ಕೋಟಿ ರೂ ಲಂಚ ನೀಡಿದ್ದಾರೆ ಎಂದು ರಾಜ್ಯ ವಿಧಾನ ಪರಿಷತ್ತಿನ ಪ್ರತಿಪಕ್ಷದ ಮಾಜಿ ವಿಪಕ್ಷ ಮುಖಂಡ ವಿ ಎಸ್ ಉಗ್ರಪ್ಪ ಮಂಗಳವಾರ ಆಪಾದಿಸಿದ್ದಾರೆ. ಇಲ್ಲಿನ ಟೌನ್‌ಹಾಲಿನಲ್ಲಿ ನಡೆದ ಕಾಂಗೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, 'ಈ ಕಿಕ್‌ಬ್ಯಾಕ್‌ನಲ್ಲಿ ಆರೆಸ್ಸೆಸ್ ಪಾಲೂ ಇದೆ. ಬಿಜೆಪಿ ಹೈಕಮಾಂಡಿಗೆ ದಮ್ಮಿದ್ದರೆ ಈ ಪ್ರಕರಣ ಸಿಬಿಐ ತನಿಖೆಗೊಪ್ಪಿಸಲಿ. ಯಡಿಯೂರಪ್ಪ ಹಣ ನೀಡಿಲ್ಲವೆಂದು ಸಾಬೀತಾದಲ್ಲಿ ನಾನು ಆರೆಸ್ಸೆಸ್ ಅಥವಾ ಮುಖ್ಯಮಂತ್ರಿಯ ಆಳಾಗಿ ದುಡಿಯಲು ಸಿದ್ಧ' ಎಂದು ಸವಾಲೆಸೆದಿದ್ದಾರೆ. id="toptextpromo">ರಾಜ್ಯದಲ್ಲಿ
ಇತ್ತೀಚೆಗೆ ಬಿಜೆಪಿ ಶಾಸಕರು ಬಂಡಾಯ ಎದ್ದಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದಿಲ್ಲಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ರಹಸ್ಯ ಭೇಟಿಯಾಗಿ ತನ್ನ ಬೇಳೆ ಬೇಯಿಸಿಕೊಂಡಿದ್ದಾರೆ. 'ನಾನು ಸತ್ಯವನ್ನೇ ಹೇಳುತ್ತಿದೇನೆ. ಯಡಿಯೂರಪ್ಪ ಲಂಚದ ಬಲದಿಂದ ಮತ್ತೊಂದು ಅವಧಿಗೆ ಸಿಎಂ ಆಗಿ ಮುಂದುವರಿದಿದ್ದಾರೆ. ಅವರು ಕೇಂದ್ರೀಯ ಬಿಜೆಪಿ ನಾಯಕರಿಗೆ ಲಂಚ ನೀಡಿಲ್ಲ ಎಂಬುದನ್ನು ತನಿಖೆಯಿಂದ ಸಾಬೀತಾದರೆ ನಾನು ಅವರ ಮನೆಯಲ್ಲಿ ದುಡಿಯಲು ಸಿದ್ಧ' ಎಂದು ಉಗ್ರಪ್ಪ ಸಿಎಂ ಮತ್ತು ಅವರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>"ಯಡಿಯೂರಪ್ಪ
ಆಧುನಿಕ ಭಸ್ಮಾಸುರ" ಎಂದ ಉಗ್ರಪ್ಪ, "ಸಿಎಂ ಮತ್ತು ಅವರ ತಂಡ ಅಲಿಬಾಬಾ ಮತ್ತು 40 ಮಂದಿ ಕಳ್ಳರಂತೆ" ಅವರು ಬೇಕೆಂದಾಗ ವಿಕಾಸಸೌಧ, ವಿಧಾನಸೌಧ, ಲಾಲ್‌ಬಾಗ್, ಕಬ್ಬನ್ ಪಾರ್ಕುಗಳನ್ನೂ ಡಿನೋಟಿಫೈ ಮಾಡಿ ಬಿಡುತ್ತಾರೆ ಎಂದು ಟೀಕಿಸಿದ್ದಾರೆ.ಇಷ್ಟೇ ಅಲ್ಲದೆ ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆ ಹಗರಣಗಳ ಹಿನ್ನೆಲೆಯಲ್ಲೂ ರಾಜ್ಯ ಬಿಜೆಪಿಗರು (ಗಣಿಧಣಿಗಳು) ಪಕ್ಷದ ಕೇಂದ್ರ ನಾಯಕತ್ವಕ್ಕೆ ಭಾರೀ ಲಂಚ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.











Click it and Unblock the Notifications