• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲಗಾ-ಬೆಳಗಾವಿ ಹೆದ್ದಾರಿಗೆ ಯಡಿಯೂರಪ್ಪ ಹೆಸರು

By Mahesh
|
Halaga Belgavi highway Yeddyurappa name
ಬೆಳಗಾವಿ, ಡಿ.1: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ4ರ ಹಲಗಾದಿಂದ ಹಳೇ ಬೆಳಗಾವಿ ಕ್ರಾಸ್ ತನಕದ ನಾಲ್ಕು ಪಥಗಳ ರಸ್ತೆಗೆ ನಾಮಕರಣ ಮಾಡಲು ಮಹಾನಗರಪಾಲಿಕೆ ನಿರ್ಧರಿಸಿದೆ. ಡಿ.3ರಂದು ನಡೆಯುವ ಪಾಲಿಕೆ ಪರಿಷತ್ ಸಭೆಯಲ್ಲಿ ಪೂನಾ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಾಲ್ಕು ಪಥಗಳ ರಸ್ತೆಗೆ ನಾಮಕರಣ ಮಾಡುವ ಪ್ರಸ್ತಾವನೆ ಮಂಡಿಸಲಾಗುವುದು ಹಾಗೂ ಅಂದೇ ಹೊಸ ನಾಮಕರಣಕ್ಕೆ ಅನುಮತಿ ನೀಡಲಾಗುವುದು ಎಂದು ಪಾಲಿಕೆ ಪ್ರಕಟಿಸಿದೆ.

ಹತ್ತು ತಿಂಗಳ ನಂತರ ಬೆಳಗಾವಿ ಮಹಾನಗರಪಾಲಿಕೆ ಇದೇ ಮೊದಲ ಬಾರಿಗೆ ಪಾಲಿಕೆಯ ಕೌನ್ಸಿಲ್ ಸಭೆ ಕರೆದಿದೆ. ಕಾರ್ಯಸೂಚಿ 80ಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಯಡಿಯೂರಪ್ಪ ಹೆಸರಿಡುವ ಪ್ರಸ್ತಾವವಿದೆ. ರಾಷ್ಟ್ರೀಯ ಹೆದ್ದಾರಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲದಿರುವುದರಿಂದ ಈ ನಿರ್ಧಾರ ಜನರಲ್ಲಿ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಯವರನ್ನು ಓಲೈಸಲು ಪಾಲಿಕೆ ಈ ಕ್ರಮಕ್ಕೆ ಮುಂದಾಗಿದ್ದು, ಕೌನ್ಸಿಲ್ ಸಭೆ ನಡೆಸದ ಪಾಲಿಕೆಗೆ ಸರ್ಕಾರ ಕಾರಣ ಕೇಳಿ ಇತ್ತೀಚೆಗೆ ನೊಟೀಸು ಜಾರಿ ಮಾಡಿತ್ತು.

ರಸ್ತೆ ಅಭಿವೃದ್ಧಿ ಅಲ್ಲದೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರಾಭಿವೃದ್ಧಿ ಇಲಾಖೆ ಹಾಗೂ ಇ ಆಡಳಿತ ಫೌಂಡೆಷನ್ ಹಾಗೂ ಸರ್ವೆ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ನಿರ್ಮಲ ನಗರ ಯೋಜನೆಯಲ್ಲಿ ಬೆಳಗಾವಿ ನಗರ ಪಾಲಿಕೆ ಸಕ್ರಿಯವಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಅಹವಾಲುಗಳನ್ನು ವೆಬ್ ಮೂಲಕ ಕೂಡಾ ಪಾಲಿಕೆಗೆ ತಲುಪಿಸಬಹುದು ಎಂದು ಕನ್ನಡಿಗ ಮೇಯರ್ ನಿಂಗಪ್ಪ ಬಾಳಪ್ಪ ಅವರು ಹೇಳಿದರು. ಆದರೆ, ಬೆಳಗಾಂ ಬೆಳಗಾವಿ ಆದರೂ, ಪಾಲಿಕೆ ತಾಣದಲ್ಲಿ, ಇಮೇಲ್ ನಲ್ಲಿ ಮುನ್ಫಿಪಲ್ ಫೋರಂ ನಲ್ಲಿ ಇನ್ನೂ ಬೆಳಗಾಂ ಎಂದೇ ಗೋಚರಿಸುತ್ತಿರುವುದು ವಿಪರ್ಯಾಸ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Halaga Belagavi four line highway road which comes in Poona Belagavi National Highway 4 to be renamed after Yeddyurappa said Belagaum City Corporation Kannadiga Mayor Nirawani Ningappa Balappa. coucncil meeting scheduled on Dec.3 and decision on naming highway four line road shall be taken he added.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more