ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ಡ್ರೈವಿಂಗ್ ಸ್ಕೂಲ್
ಜೈಪುರ,
ನ.27: ಪ್ರಸಿದ್ಧ ಆಟೋಮೊಬೈಲ್ ಉತ್ಪಾದಕ ಕಂಪನಿ ಅಶೋಕ್ ಲೇಲ್ಯಾಂಡ್ ಶೀಘ್ರದಲ್ಲೇ ಚಾಲಕ ತರಬೇತಿ ಶಾಲೆಯನ್ನು ತೆರೆಯಲು ಸಿದ್ಧತೆ ನಡೆಸಿದೆ. ಡ್ರೈವಿಂಗ್ ಸ್ಕೂಲನ್ನು ಜೈಪುರದಲ್ಲಿ ಪ್ರಾರಂಭಿಸುತ್ತಿರುವುದಾಗಿ ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ. id="toptextpromo">ಈಗಾಗಲೆ
ಡ್ರೈವಿಂಗ್ ಸ್ಕೂಲ್ ಪ್ರಾರಂಭಿಸುವ ಕಂಪನಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇವೆ ಎಂದು ಅಶೋಕ್ ಲೇಲ್ಯಾಂಡ್ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂಬರುವ
ದಿನಗಳಲ್ಲಿ ಕಂಪನಿಯು ತನ್ನ ಉತ್ಪದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ. ಮುಂಬರು ಎರಡು ವರ್ಷಗಳಲ್ಲಿ ಅಲ್ವಾರಾದಲ್ಲಿರುವ ಕಂಪನಿಯ ಘಟಕಕ್ಕೆ ರು.75 ಕೋಟಿ ಬಂಡವಾಳ ಹೂಡಲಾಗುತ್ತದೆ ಎಂದು ಕಂಪನಿ ವಿವರ ನೀಡಿದೆ.











Click it and Unblock the Notifications