ಬಳ್ಳಾರಿಯಲ್ಲಿ ಮಾರುತಿ ಡ್ರೈವಿಂಗ್ ಸ್ಕೂಲ್ ಆರಂಭ

Maruti Driving School starts in Bellary
ಬಳ್ಳಾರಿ, ನ. 24 : ಬಳ್ಳಾರಿಯ ಮಾರುತಿ ಕೆಪಿಎಫ್ ಶೋರೂಂನಲ್ಲಿ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲೇ ಪ್ರಪ್ರಥಮ ಬಾರಿಗೆ ಆಧುನಿಕ ತಂತ್ರಜ್ಞಾನದ ಮಾರುತಿ ವಾಹನ ಚಾಲನಾ ತರಬೇತಿ ಶಾಲೆ ಬುಧವಾರದಿಂದ ಪ್ರಾರಂಭವಾಗಿದೆ.

ಖ್ಯಾತ ವೈದ್ಯ ಡಾ ಬಿಕೆ ಶ್ರೀನಿವಾಸಮೂರ್ತಿ ಅವರು ಶಾಲೆಯನ್ನು ಉದ್ಘಾಟಿಸಿ, ಈ ಶಾಲೆಯು ಹೈದರಾಬಾದ್ - ಕರ್ನಾಟಕ ಭಾಗದಲ್ಲೇ ವಿಶೇಷವಾಗಿದ್ದು ಆಧುನಿಕತೆಯಿಂದ ಕೂಡಿದೆ. ಇಲ್ಲಿ ಚಾಲನಾ ತರಬೇತಿ ಪಡೆಯುವವರು ಚಾಲನಾ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ರಸ್ತೆಯ ಮೇಲಿನ ಆಗುಹೋಗುಗಳನ್ನು ನಿಖರವಾಗಿ ಗ್ರಹಿಸುವ ಸಾಮರ್ಥ್ಯ ಪಡೆಯುತ್ತಾರೆ ಎಂದರು.

ಡ್ರೈವಿಂಗ್ ಸಿಮುಲೇಟರ್ ಕುರಿತು ಕೆಪಿಎಫ್‌ನ ಸಿಇಓ ವಿಕೆ ವಿಜಯಾನಂದ ಅವರು ಮಾತನಾಡಿ, ಇದು ಚಾಲನಾ ಸಾಮರ್ಥ್ಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಆಧುನಿಕ ತಂತ್ರಜ್ಞಾನದ ಯಂತ್ರ. ಚಾಲನಾ ತರಬೇತಿ ಪಡೆಯಲು ಆಸಕ್ತರು ಈ ಸಿಮುಲೇಟರ್ ಮೂಲಕ ಚಾಲನಾ ಸಂದರ್ಭದಲ್ಲಿ ಸ್ಟಿಯರಿಂಗ್, ಬ್ರೇಕ್, ಕ್ಲಚ್, ಹಾರ್ನ್‌ಗಳ ಬಳಕೆ ಕುರಿತು ಪ್ರಾಥಮಿಕ ಮಾಹಿತಿಯನ್ನು ಪಡೆಯುವುದು ಸುಲಭ ಸಾಧ್ಯ ಎಂದು ಹೇಳಿದರು.

ವಾಹನವನ್ನು ಪ್ರಾರಂಭಿಸುವ ಪೂರ್ವದಲ್ಲಿ ಮತ್ತು ಚಾಲಿಸುವಾಗ ಪ್ರಾಥಮಿಕವಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿಯನ್ನು ಈ ಸಿಮುಲೇಟರ್ ನೀಡುತ್ತದೆ. ಈ ಯಂತ್ರದ ಬೆಲೆ 4 ಲಕ್ಷ ರುಪಾಯಿ ಆಗಿದ್ದು, ಮಾರುತಿ ಸುಝಕಿ ಕಂಪನಿಯೇ ಪೂರೈಸುತ್ತಿದೆ. ಅಲ್ಲದೇ, ಚಾಲನಾ ತರಬೇತಿ, ಶುಲ್ಕ ಎಲ್ಲವನ್ನೂ ಕಂಪನಿಯೇ ನಿರ್ಧರಿಸುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಇನ್ಸಿಟ್ಯೂಟ್ ಆಫ್ ಡ್ರೈವಿಂಗ್ ಅಂಡ್ ಟ್ರಾಫಿಕ್ ರಿಸರ್ಚ್ ಸಂಸ್ಥೆಯಿಂದ ತರಬೇತಿ ಪಡೆದವರು ತರಬೇತಿ ನೀಡಲಿದ್ದು, 21 ದಿನಗಳ ತರಬೇತಿಯಲ್ಲಿ 7 ತಾಸು ಥಿಯೇರಿ, 3 ತಾಸು ಸಿಮುಲೇಟರ್ ಚಾಲನೆ, 10-15 ತಾಸುಗಳು ಟ್ರ್ಯಾಕ್‌ನಲ್ಲಿ ಚಾಲನೆಯನ್ನು ಕಲಿಸಲಾಗುತ್ತದೆ ಎಂದು ವಿಕೆ ವಿಜಯಾನಂದ ಅವರು ತಿಳಿಸಿದ್ದಾರೆ.

ತರಬೇತಿ ಹವಾನಿಯಂತ್ರಿತ ತರಗತಿ ಕೋಣೆಯಲ್ಲಿ ಮತ್ತು ಹವಾನಿಯಂತ್ರಿಯ ವಾಹನದಲ್ಲೇ ನೀಡಲಾಗುತ್ತದೆ. ಮೂಲ ಚಾಲನಾ ಪದ್ಧತಿ, ಸಿಟಿ ಲೋ ಟ್ರಾಫಿಕ್, ಸಿಟಿ ಹೈ ಟ್ರಾಫಿಕ್, ನ್ಯಾಷನಲ್ ಹೈವೇ ಲೋ ಟ್ರಾಫಿಕ್, ನ್ಯಾಷನಲ್ ಹೈವೇ ಅಡ್ವಾನ್ಸ್ಡ್ ಟ್ರಾಫಿಕ್, ಹಿಲ್ ಲೋ ಅಂಡ್ ಹೈ ಟ್ರಾಫಿಕ್ ತರಬೇತಿಯನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+