ಸ್ವಿಸ್ ಬ್ಯಾಂಕ್ ಕಪ್ಪುಹಣ ಠೇವಣಿ, ಭಾರತ ನಂ.1

ಭಾರತೀಯರು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿರುವ ಠೇವಣಿ ಮೊತ್ತ 65, 223 ಬಿಲಿಯನ್ ಎಂದು ಹೇಳಲಾಗಿದೆ. ಭಾರತವನ್ನು ಹಿಂದಿಕ್ಕುವಲ್ಲಿ ಕಮ್ಯೂನಿಸ್ಟ್ ದೇಶಗಳಾದ ರಷ್ಯಾ, ಚೀನಾ ಹಿಂದೆ ಬಿದ್ದಿರುವುದು ಆರ್ಥಿಕ ಪಂಡಿತರಲ್ಲಿ ಅಚ್ಚರಿ ಮೂಡಿಸಿದೆ. ರಷ್ಯಾ ಎರಡನೇ ಸ್ಥಾನದಲ್ಲಿದ್ದರೆ, ಚೀನಾ ಐದನೇ ಸ್ಥಾನ ಪಡೆದಿದೆ.
ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಾಸ್ ತಂದು ಸಾರ್ವಜನಿಕ ಯೋಜನೆಗಳಲ್ಲಿ ತೊಡಗಿಸುವ ಬಗ್ಗೆ ದನಿ ಎತ್ತಿದ್ದವರಲ್ಲಿ ಯೋಗ ಗುರು ಬಾಬಾ ರಾಮ ದೇವ್ ಹಾಗೂ ಭಾಜಪದ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರು ಪ್ರಮುಖರು. ಆದರೆ, ಸುರಕ್ಷತೆ ಹಾಗೂ ಗೌಪ್ಯತೆಗೆ ಹೆಸರಾಗಿರುವ ಸ್ವಿಸ್ ಬ್ಯಾಂಕ್ ಇದೇ ಮೊದಲ ಬಾರಿಗೆ ತನ್ನ ಬ್ಯಾಂಕ್ ನಲ್ಲಿರುವ ಭಾರತೀಯರ ಕಪ್ಪು ಹಣದ ಮೊತ್ತವನ್ನು ಘೋಷಿಸಿದೆ.
ಆರ್ಥಿಕ ತಜ್ಞರ ಪ್ರಕಾರ, ಸ್ವಿಸ್ ಬ್ಯಾಂಕ್ ನ ಹಣವನ್ನು ಭಾರತಕ್ಕೆ ತಂದಿದ್ದೇ ಆದಲ್ಲಿ, ಭಾರತದಲ್ಲಿ ಬಡತನ ಹೇಳ ಹೆಸರಿಲ್ಲದ್ದಂತೆ ಮಾಯವಾಗುತ್ತದೆ. ಸರ್ಕಾರ ಈ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬಹುದು, ಜನಪರ ಯೋಜನೆಗಳಿಗೆ ಬಳಸಬಹುದು. ಹಸಿವು, ಬಡತನ ನಿವಾರಣೆಯಾಗುತ್ತದೆ. ಕಪ್ಪು ಹಣ ಇಟ್ಟಿರುವ ಖದೀಮರನ್ನು ಬೆಳಕಿಗೆ ತಂದು, ಶಿಕ್ಷಿಸಿ, ಭಾರತ ಉದ್ಧಾರ ಮಾಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗುವುದೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.












Click it and Unblock the Notifications