ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಜುಂಡನ ಮೇಲಾಣೆ, ಡಿನೋಟಿಫೈ ಮಾಡಲ್ಲ

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ನ. 18 : ಇನ್ನು ಮುಂದೆ ಕಾನೂನು ಚೌಕಟ್ಟು ಮೀರಿ ಯಾವುದೇ ಕೆಲಸ ಮಾಡುವುದಿಲ್ಲ. ನಂಜುಂಡೇಶ್ವರನ ಮೇಲಾಣೆ ನನ್ನನ್ನು ನಂಬಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸಕ್ಕೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಡಿನೋಟಿಫೈ ಮಾಡುವುದಿಲ್ಲ. ಬಿಡಿಎನಲ್ಲಿ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ನಿವೇಶನ ಹಂಚಿಕೆ ಮಾಡುವುದಿಲ್ಲ. ಎಷ್ಟೇ ಒತ್ತಡ ಬಂದರೂ ಕಾನೂನು ಮೀರಿ ಕೆಲಸ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ ಎಂದರು.

ಡಿನೋಟಿಫೈ ಮಾಡುವುದಕ್ಕೆ ಅಧಿಕಾರಿಗಳ ಸಮಿತಿ ನೇತೃತ್ವದ ಸಮಿತಿ ರಚಿಸುತ್ತೇನೆ. ಆ ಸಮಿತಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ನಾನು ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹಾಲಿ, ಮಾಜಿ ಶಾಸಕರಿಗೆ, ಸಂಸದರಿಗೆ ನಿವೇಶನ ನೀಡಿದ್ದೇನೆ. ನಿವೇಶನ ನೀಡಿದ್ದು ತಪ್ಪು ಎನ್ನುವುದಾದರೆ ಮುಂದಿನ ದಿನಗಳಲ್ಲಿ ಜಿ ಕೆಟಗರಿಯಲ್ಲಿ ನಿವೇಶನಗಳನ್ನೇ ಹಂಚಿಕೆ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

English summary
Amid the strong allegation of multi-crore illegal land scandal, Karnataka Chief Minister BS Yeddyurappa surprisingly vowed that he will not denotify any land again and thus urged to snub his earlier works on denotification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X