ಭಾಗ್ಯಲಕ್ಷ್ಮಿ ಸೀರೆಯಲ್ಲೂ ಯಡ್ಡಿ ಲೂಟಿ : ಎಚ್ಡಿಕೆ
ಬೆಂಗಳೂರು,
ನ. 18 : ರಾಮನಗರದಲ್ಲಿ ನಡೆಯಲಿರುವ ಭಾಗ್ಯಲಕ್ಷ್ಮಿ ಸೀರೆ ವಿತರಣೆ ಸಮಾರಂಭಕ್ಕೆ ಹೋಗುತ್ತೇನೆ. ಸೀರೆ ಹಿಂದಿನ ಲೂಟಿ ಕತೆಯನ್ನು ಅಲ್ಲಿ ಹೇಳುತ್ತೇನೆ. ಸಿಎಂ ವಿರುದ್ದ ಆರಂಭಿಸಿರುವ ಭೂ-ಹಗರಣ ಮತ್ತು ಸೀರೆ ಹಗರಣಗಳ ವಿರುದ್ದ ಆರಂಭಿಸಿರುವ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದೆ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. id="toptextpromo">ಈ
ಸರಕಾರ ಬಡ ಮಕ್ಕಳಿಗೆ ವಿತರಿಸುತ್ತಿರುವ ಸೀರೆಯಲ್ಲೂ ದುಡ್ಡು ಮಾಡಿದೆ. ಸರಕಾರೀ ಆದೇಶದಲ್ಲಿರುವ ರಚನಾ ಗ್ರೂಪ್ ವಿಳಾಸದಲ್ಲಿ ಅಂತ ಕಂಪನಿಯೇ ಇಲ್ಲ, ಬೇರೊಂದು ಕಂಪನಿಯಿದೆ. ಒಂದು ಸೀರೆಗೆ 195 ರುಪಾಯಿ ನೀಡಿದ್ದಾರೆ. ನಾವು ಅಲ್ಲಿಂದಲೇ ಅದೇ ಗುಣಮಟ್ಟದ ಸೀರೆಯನ್ನು 120 ರುಪಾಯಿಗೆ ತಂದಿದ್ದೇವೆ. ಒಂದೆರಡು ದಿನದಲ್ಲಿ ಸೀರೆ ಹಗರಣದ ಎಲ್ಲಾ ಮಾಹಿತಿ ನೀಡಲಿದ್ದೇನೆ ಎಂದು ಕುಮಾರಸ್ವಾಮಿ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈಗ
ಹೆಣ್ಣುಮಕ್ಕಳಿಗೆ ಲಂಗ ಕೊಡುವುದಾಗಿ ಪ್ರಕಟಿಸಿದ್ದಾರೆ. ಅವರು ಕೊಡುತ್ತಿರುವ ಸೀರೆಯನ್ನು ಲಂಗವಿಲ್ಲದೆ ಉಡಲಾಗುವುದಿಲ್ಲ. ಇನ್ನು ಲಂಗ ಯಾವ ಕಳಪೆ ಮಟ್ಟದಲ್ಲಿರುತ್ತೋ ದೇವರೇ ಬಲ್ಲ. ಉತ್ತರ ಕರ್ನಾಟಕದ ಬಡ ನೇಕಾರರು ಸಿದ್ದ ಪಡಿಸುವ ಸೀರೆ ಖರೀದಿಸಿದ್ದರೆ, ಇಂಥ ಅನಾಹುತವಾಗುತ್ತಿರಲಿಲ್ಲ. ಈ ರಚನಾ ಅನ್ನುವ ಕಂಪೆನಿ ಯಾವುದು? ಆ ಕಂಪನಿ ಎಲ್ಲಿದೆ ? ಕಮಿಷನ್ ಎಷ್ಟು ಎಂಬುದನ್ನು ತಿಳಿಸಲು ಇನ್ನೆರಡು ದಿನದಲ್ಲಿ ದಾಖಲೆ ಸಮೇತ ನಿಮ್ಮ ಮುಂದೆ ಬರುತ್ತೇನೆ ಎಂದು ಮಾಧ್ಯಮದವರಿಗೆ ಕುಮಾರಸ್ವಾಮಿ ತಿಳಿಸಿದ್ದಾರೆ.











Click it and Unblock the Notifications