ಏಳನೇ ಮಹಡಿಯಿಂದ ಬಿದ್ದು ಅಸುನೀಗಿದ ಬಾಲಕ
ಬೆಂಗಳೂರು,
ನ. 18 : ವಿದೇಶಿ ಮೂಲದ 13 ವರ್ಷದ ಬಾಲಕನೊಬ್ಬ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಅಪಾರ್ಟ್ ಮೆಂಟಿನ ಏಳನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಅಸುನೀಗಿದ ಘಟನೆ ಇಂದು ಜರುಗಿದೆ. id="toptextpromo">ಮೃತನನ್ನು
ಅಲನ್ ಜಾನ್ ವಾಂಜೆನ್ ಬರಾಜಾ ಎಂದು ಗುರುತಿಸಲಾಗಿದೆ. ಯಲಹಂಕದ ಅಂತಾರಾಷ್ಟ್ರೀಯ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಅಲನ್ ವಾಸವಿರುವ ಅಪಾರ್ಟ್ ಮೆಂಟಿನ 7ನೇ ಮಹಡಿಯಲ್ಲಿ ಆಟವಾಡುತ್ತಿದ್ದಾಗ ಅಕಸ್ಮಾತಾಗಿ ಕಾಲುಜಾರಿ ಬಿದ್ದಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಬಾಲಕನ
ತಂದೆ ಜರ್ಮನಿಯಲ್ಲಿ ಪ್ರೊಫೆಸರಾಗಿದ್ದಾರೆ. ತಾಯಿ ಚಿಲಿ ಮೂಲದವಳು. ಅಲನ್ ಈ ದಂಪತಿಗಳ ಏಕೈಕ ಮಗ. ಅವನನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆ ತಲುಪುವಾಗಲೇ ನಿಧನಹೊಂದಿದ್ದಾನೆ. ಈತ ತನ್ನ ತಾಯಿ ಸಾಂಡ್ರಾ ಬಜಾರಾಳೊಂದಿಗೆ ಕಳೆದ 1 ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ.











Click it and Unblock the Notifications