ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ನ ಗ್ರಾಫ್ ಪಾಲಾದ ಗುಲಾಬಿ ಬಣ್ಣದ ವಜ್ರ

By Mahesh
|
Google Oneindia Kannada News

Pink Diamond
ಜಿನೀವಾ, ನ.17: ಗುಲಾಬಿ ಬಣ್ಣದ ಅಪರೂಪದ ವಜ್ರವನ್ನು ಭಾರಿ ಮೊತ್ತಕ್ಕೆ ಸೊಥೆಬೀಸ್ ಸಂಸ್ಥೆ ಹರಾಜು ಹಾಕಿದೆ. ಲಂಡನ್ ಮೂಲದ ಆಭರಣ ಸಂಸ್ಥೆಯ ಒಡೆಯ ಲಾರೆನ್ಸ್ ಗ್ರಾಫ್ ಈ ಗುಲಾಬಿ ವಜ್ರದ ಒಡೆಯನಾಗಿ ವಿಶ್ವದಾಖಲೆ ಸ್ಥಾಪಿಸಿದ್ದಾನೆ. ನ. 16 ರಂದು ಜಿನೀವಾದಲ್ಲಿ ಸುಮಾರು 550 ವಸ್ತುಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು. ಈ ಪೈಕಿ ಗುಲಾಬಿ ಬಣ್ಣದ ಅಪೂರ್ವ ವಜ್ರವನ್ನು 46 ಮಿಲಿಯನ್ ಡಾಲರ್ ಹಣತೆತ್ತು ಲಾರೆನ್ಸ್ ಖರೀದಿಸಿದ್ದಾನೆ.

ಜಿನೀವಾನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಟೆಲಿಫೋನಿಕ್ ಬಿಡ್ಡಿಂಗ್ ಮೂಲಕ ಹರಾಜು ಕೂಗಿ ಈ ಅಮೂಲ್ಯ ವಜ್ರ ತನ್ನದಾಗಿಸಿಕೊಂಡಿದ್ದಾನೆ. ಅಮೆರಿಕದ ಆಭರಣ ವಹಿವಾಟುದರ ಹ್ಯಾರಿ ವಿನ್ ಸ್ಟನ್ 60 ವರ್ಷಗಳ ಹಿಂದೆ ಸಂಗ್ರಹಿಸಿದ್ದ ಈ ವಜ್ರ ವಿಶ್ವದಲ್ಲೆ ಅತಿ ವಿರಳ ಎನಿಸಿದ್ದು, ಗುಲಾಬಿ ಬಣ್ಣದಲ್ಲಿ ಪರಿಶುದ್ಧತೆಯಿಂದ ಕಣ್ಣು ಕೊರೈಸುತ್ತಿದೆ. 24.78 ಕ್ಯಾರಟ್ ತೂಕ ಹೊಂದಿರುವ ಈ ವಜ್ರವನ್ನು ಪ್ಲಾಟಿನಂ ಉಂಗುರವೊಂದಕ್ಕೆ ಅಳವಡಿಸಲಾಗಿದೆ.

ಅಮೂಲ್ಯ ವಜ್ರ,ಹರಳುಗಳನ್ನು ಸಂಗ್ರಹಿಸುವ ಕೋಟ್ಯಾಧೀಶ ಲಾರೆನ್ಸ್ ಈ ಮುಂಚೆ 35.56 ಕಾರೆಟ್ ತೂಕುವ ಬೂದು ಮಿಶ್ರಿತ ನೀಲಿ ಬಣ್ಣದ ವಜ್ರವನ್ನು ಲಂಡನ್ ಹರಾಜಿನಲ್ಲಿ 24.3 ಮಿಲಿಯನ್ ಡಾಲರ್ ನೀಡಿ ಗಳಿಸಿದ್ದನು. 17 ನೇ ಶತಮಾನದ ಈ ವಜ್ರ 2008ರ ಡಿಸೆಂಬರ್ ನಲ್ಲಿ ಕ್ರಿಸ್ಟೀಸ್ ಹರಾಜು ಸಂಸ್ಥೆ ಹರಾಜು ಹಾಕಿತ್ತು. ಅತಿ ದುಬಾರಿ ಬೆಲೆಗೆ ಮಾರಾಟವಾದ ವಜ್ರವನ್ನು ಹರಾಜಿನಲ್ಲಿ ಕೂಗಿ ಗೆದ್ದು ಗ್ರಾಫ್ ದಾಖಲೆ ಸ್ಥಾಪಿಸಿದ್ದರು. ಈಗ ಮತ್ತೊಮ್ಮೆ ಭಾರಿ ಮೊತ್ತಕ್ಕೆ ಅಪರೂಪದ ವಜ್ರವನ್ನು ಕೊಂಡು ತಂದು ತಮ್ಮ ಸಂಗ್ರಹಕ್ಕೆ ಸೇರಿಸಿದ್ದಾರೆ.

English summary
A rare pink diamond stone made history, as it was sold for $46 million at an auction in Sotheby’s, Geneva. Laurence Graff, a London jewelry dealer was the proud buyer of this precious stone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X