ಸ್ನೇಹಸೇತು ಕೆಡವಿ ನದಿಗೆ ಅಣೆಕಟ್ಟು ಕಟ್ಟಿದ ಚೀನಾ
ಬೀಜಿಂಗ್,
ನ.17: ಕೆಂಪು ನಾಡು ಚೀನಾದೊಂದಿಗೆ ಭಾರತ ಸ್ನೇಹ ಸೇತುವೆ ಕಟ್ಟುತ್ತಿದ್ದರೆ, ಅತ್ತ ಚೀನಾ, ವಿವಾದಿತ ಬ್ರಹ್ಮಪುತ್ರಾ ಅಣೆಕಟ್ಟನ್ನು ಸದ್ದಿಲ್ಲದೆ ನಿರ್ಮಿಸಿದೆ. 510ಮೆ.ವ್ಯಾ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗೆ ಸಹಕಾರಿಯಾಗಲೆಂದು ಈ ಅಣೆಕಟ್ಟನ್ನು ಚೀನಾ ನಿರ್ಮಾಣ ಮಾಡಿದೆ. id="toptextpromo">ಕಳೆದ
ವಾರ ಈ ಅಣೆಕಟ್ಟಿನ ಎಲ್ಲಾ ಕಾಮಗಾರಿ ಸಂಪೂರ್ಣಗೊಂಡಿದೆ. ಜಂಗ್ಮು ಜಲವಿದ್ಯುತ್ ಘಟಕದ ಯೋಜನೆಗೆ ಸಹಕಾರಿಯಾಗಲಿರುವ ಈ ಅಣೆಕಟ್ಟು ಬ್ರಹ್ಮಪುತ್ರಾ ನದಿಗೆ ಹೊಂದಿಕೊಂಡಿದ್ದು, ಗಡಿ ಹಾಗೂ ಜಲ ಹಂಚಿಕೆ ವಿವಾದದ ನಡುವೆಯೂ ಈ ಕಾಮಗಾರಿ ಪೂರ್ಣಗೊಳಿಸಿದೆ. ಟಿಬೇಟ್ ಸ್ವಾಯುತ್ತ ಪ್ರದೇಶದ ಗೈಶಾ ಗ್ರಾಮದ ಬಳಿ ಈ ಅಣೆಕಟ್ಟನ್ನು ಕಾಣಬಹುದಾಗಿದೆ. id='are-slot-1' class='oiad oi-axt oiadv'> id='top-searched-articles'>ವರ್ಷಾರಂಭಕ್ಕೆ
ದ್ವಿಪಕ್ಷೀಯ ಮಾತುಕತೆ ನಡೆದ ಸಂದರ್ಭದಲ್ಲಿ ಈ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಚೀನಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ, ವಿದ್ಯುತ್ ಉತ್ಪಾದನೆಯಿಂದ ಬ್ರಹ್ಮಪುತ್ರಾ ಜೀವನದಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಚೀನಾ,ಭರವಸೆ ನೀಡಿತ್ತು.











Click it and Unblock the Notifications