Get Updates
Get notified of breaking news, exclusive insights, and must-see stories!

ಆಂಡ್ರ್ಯಾಡ್ ಮೊಬೈಲ್ ಜಗತ್ತಿಗೆ ತೋಷಿಬಾ ಎಂಟ್ರಿ

Toshiba Smartphone
ಟೋಕಿಯೋ, ನ.15: ಜಪಾನ್ ಮೂಲದ ಎಲೆಕ್ಟ್ರಾನಿಕ್ ಉದ್ಯಮ ಸಂಸ್ಥೆ ತೋಷಿಬಾ, ಆಂಡ್ರ್ಯಾಡ್ ಮೊಬೈಲ್ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಸಿಸಿದೆ. Regza T-01C ಎಂಬ ಆಂಡ್ರ್ಯಾಡ್ ಆಧಾರಿತ ಮೊಬೈಲ್ ಫೋನ್ ಅನ್ನು ಪರಿಚಯಿಸುತ್ತಿದೆ.

ಎಲ್ಲಾ ಸ್ಮಾರ್ಟ್ ಫೋನ್ ಗಳಿಗಿಂತ ಕೊಂಚ ಭಿನ್ನವಾದ ಆಲೋಚನೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ತೋಷಿಬಾ, ಮನರಂಜನೆಗೆ ಒತ್ತು ನೀಡಿದೆ. Regza T-01C ಮೊಬೈಲ್ ಫೋನ್ ನಲ್ಲಿ 4 ಇಂಚು ಟಚ್ ಸ್ಕ್ರೀನ್ ಇದ್ದು, 480 x 854 ರಿಸ್ಯೂಲೂಷನ್ ಹೊಂದಿದೆ. ಇದಕ್ಕೆ ಪೂರಕವಾಗಿ ಡಿಜಿಟಲ್ ಟಿವಿ ಟ್ಯೂನರ್ ಇದ್ದು, ಉತ್ತಮ ಗುಣಮಟ್ಟದ ಟಿವಿ ವಾಹಿನಿಗಳನ್ನು ಮೊಬೈಲ್ ನಲ್ಲಿ ವೀಕ್ಷಿಸಬಹುದು.

ಸುಮಾರು 149 ಗ್ರಾಂ ತೂಕುವ ಮೊಬೈಲ್ ನ ಇನ್ನೊಂದು ವಿಶೇಷತೆ ಎಂದರೆ 12.2 ಮೆಗಾ ಪಿಕ್ಸಲ್ ಕೆಮೆರಾ. ಬಹುಶಃ ನೋಕಿಯಾ ಎನ್ 8 ನಲ್ಲಿ 12 MP ಕೆಮೆರಾ ಇರುವುದು ಬಿಟ್ಟರೆ ಇನ್ನ್ಯಾವುದೇ ಸ್ಮಾರ್ಟ್ ಫೋನ್ ಗಳಲ್ಲಿ ಈ ಪರಿ ಕೆಮೆರಾ ಇಲ್ಲ. ತೋಷಿಬಾ ಮೊಬೈಲ್ ಬಳಸಿ 720p HD ವಿಡಿಯೋ ಕೂಡಾ ಚಿತ್ರೀಕರಿಸಬಹುದು.

ಸದ್ಯಕ್ಕೆ ಆಂಡ್ರ್ಯಾಡ್ 2.1 ಆವೃತ್ತಿ ಆಪರೇಟಿಂಗ್ ಸಿಸ್ಟಮ್ ಇದ್ದು, ಶೀಘ್ರದಲ್ಲೇ ಸುಧಾರಿತ ತಂತ್ರಾಂಶ ಗ್ರಾಹಕರಿಗೆ ಲಭ್ಯವಾಗಲಿದೆ, ಬ್ಲೂಟೂಥ್ 2.1, ಫೆಲಿಕಾ ಇ ವ್ಯಾಲೆಟ್ ಹಾಗೂ ವೈ-ಫೈ ಕೂಡಾ ಇದೆ.

ತೋಷಿಬಾ Regza T-01Cನಲ್ಲಿ ಏನೇನಿದೆ?
* 4 ಇಂಚು ಟಿಎಫ್ ಟಿ ಟಚ್ ಸ್ಕ್ರೀನ್
* ಆಡ್ರ್ಯಾಂಡ್ 2.1 ಆಪರೇಟಿಂಗ್ ಸಿಸ್ಟಮ್
* 12.2 ಮೆಗಾ ಪಿಕ್ಸಲ್ ಕೆಮೆರಾ, 720p ಹೈ ಡಿಫಿನಿಷನ್ ವಿಡಿಯೋ
* ಲೈವ್ ಟಿವಿ
* 3ಜಿ HSPA
* ಬ್ಲೂಟೂಥ್ 2.1 ಆವೃತ್ತಿ EDR ಜೊತೆಗೆ
* ವೈ-ಫೈ ಸಂಪರ್ಕ
* ಇನ್ಫ್ರಾ ರೆಡ್ ಹಾಗೂ ಜಿಪಿಎಸ್
* ಮೈಕ್ರೋ ಎಸ್ ಡಿ ಕಾರ್ಡ್ ಸಂಪರ್ಕ
* ಫ್ಲಾಶ್ ಲೈಟ್ 4.0
* ಎಂಪಿ3/ ಎಂಪಿ 4 ಪ್ಲೇಯರ್ಸ್
* ಫೆಲಿಕಾ ನಿಸ್ತಂತು ಜಮಾ ವ್ಯವಸ್ಥೆ(wireless payment system)

ತೋಷಿಬಾ ಸಂಸ್ಥೆಯ ಬಹು ನಿರೀಕ್ಷಿತ REGZA T-01C ಮೊಬೈಲ್ 2010ರ ಡಿಸೆಂಬರ್ ಅಥವಾ 2011ರ ಜನವರಿಯಲ್ಲಿ ಜಪಾನ್ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಹಾಗೂ ಈ ಮೊಬೈಲ್ ಫೋನ್ ನ ಬೆಲೆಯನ್ನೂ ಇನ್ನೂ ಸಂಸ್ಥೆ ಪ್ರಕಟಿಸಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+