ಸುದರ್ಶನ್ ಹೇಳಿಕೆಗೆ ಆರೆಸ್ಸೆಸ್ ವಿಷಾದ
ನವದೆಹಲಿ,
ನ. 13 : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಕೆಎಸ್ ಸುದರ್ಶನ್ ನೀಡಿರುವ ವಿವಾದಿತ ಹೇಳಿಕೆಯ ಬಗ್ಗೆ ಆರೆಸ್ಸೆಸ್ ವಿಷಾದ ವ್ಯಕ್ತಪಡಿಸಿದೆ. ಸುದರ್ಶನ್ ಹೇಳಿಕೆ ಸಂಘಟನೆಯ ಅಭಿಪ್ರಾಯವಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. id="toptextpromo">ಭಾವನೆಗಳಿಗೆ
ಘಾಸಿ ಉಂಟು ಮಾಡಿರುವ ಸುದರ್ಶನರ ಹೇಳಿಕೆಯ ಕುರಿತು ಆರೆಸ್ಸೆಸ್‌ನ ಜಂಟಿ ಮಹಾಕಾರ್ಯದರ್ಶಿಯಾಗಿ ನಾನು ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಆ ಬಳಿಕದ ಬೆಳವಣಿಗೆಗಳು ದುರದಷ್ಟಕರ ಎಂದು ಸಂಘದ ನಾಯಕ ಸುರೇಶ್ ಭಯ್ಯಿಜಿ ಜೋಶಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಶಾಂತಿ ಹಾಗೂ ಸಂಯಮ ಕಾಪಾಡುವಂತೆ ಅವರು ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ವಿಚಾರದಲ್ಲಿ ಬಿಜೆಪಿಯ ಅಭಿಪ್ರಾಯವೂ ಆರೆಸ್ಸೆಸ್‌ನಂತೆಯೇ ಇದೆಯೆಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ. ಆರೆಸ್ಸೆಸ್ ಕ್ರಮ ಇರಸು ಮುರಸು ತಂದಿದೆಯೇ ಎಂಬ ಪ್ರಶ್ನೆಗೆ ಆ ರೀತಿಯಾಗಿ ನಾವೇನೂ ಹೇಳುತ್ತಿಲ್ಲ ಎಂದು ಬಿಜೆಪಿ ಹೇಳಿದೆ. ಸುದರ್ಶನ್ ಹೇಳಿಕೆ ದೇಶಾದ್ಯಂತ ಪ್ರತಿಭಟನೆ ನಡೆಸಿದ ನಂತರ ಆರೆಸ್ಸೆಸ್ ಮತ್ತು ಬಿಜೆಪಿಯಿಂದ ಈ ಸ್ಪಷ್ಟೀಕರಣ ವ್ಯಕ್ತವಾಗಿದೆ.











Click it and Unblock the Notifications