ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಧವಾ ವಿವಾಹಕ್ಕೆ ವಿರೋಧ, ಪ್ರೇಮಿಗಳು ಆತ್ಮಹತ್ಯೆ
ಮೈಸೂರು, ನ. 11 : ವಿಧವೆಯೊಬ್ಬಳನ್ನು ಮದುವೆಯಾಗಬೇಕೆಂಬ ಆದರ್ಶಕ್ಕೆ ಪೋಷಕರು ವಿರೋಧಿಸಿದ್ದರಿಂದ ಪ್ರಿಯತಮೆಯೊಂದಿಗೆ ಯುವಕ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಮೈಸೂರು ತಾಲೂಕು ಮಾರಶೆಟ್ಟಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಗ್ರಾಮದ ಶಿವಕುಮಾರ ಮತ್ತು ಲಕ್ಷ್ಮೀ ಎಂಬವರೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರಿಬ್ಬರ ಶವಗಳು ಟಿ.ನರಸೀಪುರ ರಸ್ತೆಯಲ್ಲಿರುವ ಜಂತಗಳ್ಳಿ ಗ್ರಾಮದ ಬಳಿಯ ಬಾವಿಯೊಂದರಲ್ಲಿ ದೊರೆತಿವೆ. ಮೃತ ಲಕ್ಷ್ಮೀಗೆ ವಿವಾಹವಾಗಿದ್ದು, ಒಂದು ಮಗುವಾದ ನಂತರ ಗಂಡ ಅಕಾಲಿಕ ಮರಣಕ್ಕೀಡಾಗಿದ್ದರು.
ಅಂದಿನಿಂದ ಆಕೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಈ ನಡುವೆ ಶಿವಕುಮಾರ ಮತ್ತು ಲಕ್ಷ್ಮಿಯ ಮಧ್ಯೆ ಪ್ರೇಮಾಂಕುರವಾಯಿತು. ಶಿವಕುಮಾರ ಲಕ್ಷ್ಮಿಯನ್ನು ವಿವಾಹವಾಗಲು ನಿರ್ಧರಿಸಿದನು. ಆದರೆ ಪೋಷಕರು ವಿಧವಾ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದರು. ಎಲ್ಲ ಪ್ರಯತ್ನಗಳು ವಿಫಲವಾದವು. ಹೀಗಾಗಿ ತಮ್ಮಿಬ್ಬರ ವಿವಾಹ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ ಪ್ರೇಮಿಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.