ಚಳಿಗಾಲದ ಅಧಿವೇಶನದಲ್ಲಿ ಹಗರಣಗಳ ಬಿಸಿ

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕೋಟ್ಯಂತರ ರುಪಾಯಿ ಹಗರಣದ ಆರೋಪದಿಂದಾಗಿ ಸಂಘಟನಾ ಸಮಿತಿ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ತಲೆದಂಡಕ್ಕೆ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದವು. ಕಲ್ಮಾಡಿ ನೀಡಿದ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಮಂಗಳವಾರ ತಿಳಿಸಿದ್ದಾರೆ.
ಚರ್ಚೆ ವಿಷಯಗಳು: ಚಳಿಗಾಲ ಅಧಿವೇಶನಕ್ಕೂ ಮುನ್ನಾದಿನ ಅಮೆರಿಕ ಅಧ್ಯಕ್ಷ ಒಬಾಮ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ, ಕಾಮನ್‌ವೆಲ್ತ್, ಆದರ್ಶ, 2ಜಿ ಸ್ಪೆಕ್ಟ್ರಮ್ ಸೇರಿದಂತೆ ಹಲವು ಹಗರಣಗಳನ್ನು ಮೊದಲ ದಿನವೇ ಪ್ರಸ್ತಾಪಿಸಿ ಸರಕಾರವನ್ನು ಮುಜುಗರಕ್ಕೀಡುಮಾಡಲು ವಿರೋಧ ಪಕ್ಷಗಳು ಸಿದ್ಧವಾಗಿವೆ.
ಈ ಹಿನ್ನೆಲೆಯಲ್ಲಿಯೇ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಸರ್ವಪಕ್ಷಗಳ ನಾಯಕರ ಸಭೆಯನ್ನು ಕರೆದು ಅಧಿವೇಶನದ ಮೊದಲ ದಿನ ಕಲಾಪ ಸರಾಗವಾಗಿ ನಡೆಯುವಂತೆ ಸಹಕರಿಸಲು ಮಾಡಿಕೊಂಡ ಮನವಿ ವಿಫಲವಾಗಿದೆ.
ಅಂಗೀಕಾರಕ್ಕೆ ಕಾದಿರುವ ವಿಧೇಯಕಗಳು: ಡಿ.13ರ ವರೆಗೂ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕೆಲ ಪ್ರಮುಖ ವಿಧೇಯಕಗಳನ್ನು ಸದನ ಮುಂದಿಡಲು ಯುಪಿಎ ಸರ್ಕಾರ ಸಜ್ಜಾಗಿದೆ. ಅವುಗಳಲ್ಲಿ
ಮಹಿಳಾ ಮೀಸಲಾತಿ ವಿಧೇಯಕ 2008(108 ತಿದ್ದುಪಡಿ):- ಲೋಕಸಭೆ ಹಾಗೂ ವಿಧಾನಸಭೆಗಳ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಿರುವಂತೆ ತಿದ್ದುಪಡಿ ತರಲಾಗಿದೆ.
ಭೂ ಕಬಳಿಕೆ (ತಿದ್ದುಪಡಿ)ವಿಧೇಯಕ 2010: ಗಣಿಗಾರಿಕೆ ಹೆಸರಿನಲ್ಲಿ ಮನೆ ಕಳೆದುಕೊಂಡ ನಿರ್ಗತಿಕರಿಗೆ(ಮುಖ್ಯವಾಗಿ ಬುಡಕಟ್ಟು ಜನಾಂಗ) ಪುನರ್ವಸತಿ ಕಲ್ಪಿಸುವ ಬಗ್ಗೆ ಮಸೂದೆ ಮಂಡನೆ.
ಅಭಿವೃದ್ಧಿಗಾಗಿ ಭೂ ಕಬಳಿಕೆ ಹಾಗೂ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಸಮತೋಲನ ಕಾಯ್ದುಕೊಳ್ಳಲಾಗುವುದು. ಸಾರ್ವಜನಿಕರ ಹಿತಕ್ಕಾಗಿ ಭೂ ಸ್ವಾದೀನಕ್ಕೆ ಒಪ್ಪಿಗೆ ಸೂಚಿಸುವುದು ಇವೇ ಮುಂತಾದ ತಿದ್ದುಪಡಿಗಳನ್ನು 1894ರ ಭೂ ಸ್ವಾಧೀನ ಕಾಯಿದೆಗೆ ಅನ್ವಯವಾಗುವಂತೆ ಮಾಡಲಾಗಿದೆ.
ಗಣಿ ಹಾಗೂ ಖನಿಜ ಕಾಯಿದೆ(ಅಭಿವೃದ್ಧಿ ಹಾಗೂ ನಿಯಂತ್ರಣ ತಿದ್ದುಪಡಿ) 2009: ಗಣಿಗಾರಿಕೆಗೆ ಲೈಸನ್ ಒದಗಿಸುವುದು, ಲೈಸನ್ ರದ್ದು ಪಡಿಸುವುದು ಅಥವಾ ಭೋಗ್ಯಕ್ಕೆ ಇರುವ ಗಣಿಗಾರಿಕೆ ಭೂಮಿಯನ್ನು ಸರ್ಕಾರ ನೀಡುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ.
ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯಿದೆ, 2010 : ಶಸ್ತ್ರಾಸ್ತ್ರ ಹೊಂದಲು ಬೇಕಾದ ಅಗತ್ಯ ಲೈಸನ್ಸ್ ನೀಡಿಕೆಗೆ ನಿಯಮಾವಳಿಗಳನ್ನು ರೂಪಿಸುವುದು ಇದರ ಪ್ರಮುಖ ಅಂಶವಾಗಿದೆ.
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications