Get Updates
Get notified of breaking news, exclusive insights, and must-see stories!

ಅಮೆರಿಕನ್ನರ ಉದ್ಯೋಗ ಕಸಿಯುವುದಿಲ್ಲ : ಪ್ರಧಾನಿ

India to be instrumental in creating jobs in US
ನವದೆಹಲಿ, ನ.9: ಅಮೆರಿಕದಲ್ಲಿನ ನಿರುದ್ಯೋಗ ಸಮಸ್ಯೆಗೆ ಭಾರತ ಕಾರಣವಲ್ಲ. ಅಮೆರಿಕನ್ನರ ಉದ್ಯೋಗ ನಾವು ಕಸಿಯುತ್ತಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ ಮಾಡುವಂತೆ ಭಾರತಕ್ಕೆ ಒಬಾಮಾ ಆಹ್ವಾನವಿತ್ತಿದ್ದಾರೆ. ಹೈದರಾಬಾದ್ ಭವನದಲ್ಲಿ ಇಂದು ಮಧ್ಯಾಹ್ನ ನಡೆದ ಭಾರತ ಹಾಗೂ ಅಮೆರಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೊರಗುತ್ತಿಗೆ, ರಕ್ಷಣಾ ವ್ಯವಹಾರ, ತಂತ್ರಜ್ಞಾನ ಕುರಿತಾದ ಮಹತ್ವದ ಅಂಶಗಳನ್ನು ಉಭಯ ನಾಯಕರು ಹೊರಗೆಡವಿದರು.

ಹೊರಗುತ್ತಿಗೆ ಎಂದಿಗೂ ಮಾರಕವಲ್ಲ. ಇದರಿಂದ ಸಂಸ್ಥೆಯ ಕಾರ್ಯಕ್ಷಮತೆ ಹೆಚ್ಚುವುದಲ್ಲದೆ, ಉತ್ಪನ್ನದ ಅಭಿವೃದ್ಧಿಯಾಗುತ್ತದೆ. ತನ್ಮೂಲಕ ಅಮೆರಿಕಕ್ಕೂ ಲಾಭವಿದೆ ಎಂದು ಪ್ರಧಾನಿ ಸಿಂಗ್ ಅಭಿಪ್ರಾಯಪಟ್ಟರು. ತಂತ್ರಜ್ಞಾನ ವಿನಿಮಯ, ವಾಣಿಜ್ಯ, ವ್ಯವಹಾರ ಒಪ್ಪಂದ, ಬಂಡವಾಳ ಹೂಡಿಕೆ ಮೂಲಕ ಉದ್ಯೋಗ ಸೃಷ್ಟಿ ಅಲ್ಲದೆ, ನಾಗರಿಕರ ಜೀವನ ಮಟ್ಟ ಸುಧಾರಣಾ ಕ್ರಮದ ಬಗ್ಗೆ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಉದ್ಯೋಗ ಸೃಷ್ಟಿ ಮೂಲ ಮಂತ್ರ: ಅಮೆರಿಕದಲ್ಲಿದ್ದಾಗ ಹೊರಗುತ್ತಿಗೆ ಬಗ್ಗೆ ಕಿಡಿಕಾರಿದ್ದ ಒಬಾಮಾ, ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಏನನ್ನೂ ಹೇಳದೆ ನುಣಚಿಕೊಂಡರು. ಆದರೆ, ಭಾರತ ಪ್ರವಾಸದ ಮೂಲ ಉದ್ದೇಶಗಳಲ್ಲಿ ಉದ್ಯೋಗ ಸೃಷ್ಟಿ ಪ್ರಮುಖವಾದದ್ದು ಎಂದು ಸ್ಪಷ್ಟಪಡಿಸಿದರು. ಕನಿಷ್ಠ 50 ಸಾವಿರ ಜನರ ಉದ್ಯೋಗ ಖಾತ್ರಿಪಡಿಸುವುದು ನನಗೆ ಮುಖ್ಯವಾಗಿತ್ತು ಎಂದರು.

ಒಬಾಮಾರ ಆರ್ಥಿಕ ನೀತಿ ಹಾಗೂ ಉದ್ಯೋಗ ನೀತಿಯ ಬಗ್ಗೆ ಅಮೆರಿಕದಲ್ಲಿ ಅಪಸ್ವರಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಭಾರತದೊಂದಿಗಿನ ಈ ಉದ್ಯೋಗ ಖಾತ್ರಿ ಒಪ್ಪಂದ ಮಹತ್ವದ್ದಾಗಿದೆ. ಇದಲ್ಲದೆ 10 ಬಿಲಿಯನ್ ಮೌಲ್ಯದ ಸುಮಾರು 20ಕ್ಕೂ ಅಧಿಕ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿಹಾಕಲಾಗಿದೆ.

ಭಾರತವನ್ನು ಸೂಪರ್ ಪವರ್ ಎಂದಿರುವ ಒಬಾಮಾರ ಆರ್ಥಿಕ ನೀತಿಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮನಮೋಹನ್ ಸಿಂಗ್, ಅಮೆರಿಕದ ಉದ್ಯಮಿಗೆ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು. ಈ ಮೂಲಕ ಮುಂದಿನ ಮೂರು ದಶಕಗಳಲ್ಲಿ ಶೇ. 9 ರಿಂದ 10 ರಷ್ಟು ಔದ್ಯೋಗಿಕ ಬೆಳವಣಿಗೆ ಕಾಣಬಹುದು ಎಂದರು.

ರಫ್ತು ನಿರ್ಬಂಧ ಸಡಿಲ: ಮಿಲಿಟರಿ ಹಾಗೂ ನಾಗರೀಕ ಸೌಲಭ್ಯ ಸೇರಿದಂತೆ ಕೆಲ ಪ್ರಮುಖ ಕ್ಷೇತ್ರಗಳಲ್ಲಿನ ರಫ್ತು ನಿಯಮಾವಳಿಗಳಿಗೆ ಬದಲಾವಣೆ ತಂದು, ವ್ಯಾಪಾರ ವಹಿವಾಟು ಸುಗುಮಗೊಳಿಸುವ ಭರವಸೆಯನ್ನು ಒಬಾಮಾ ನೀಡಿದರು. ಭಾರತ US ಕಾರ್ಗೋ ವಿಮಾನಗಳ ಖರೀದಿಸಿದರೆ ಅಮೆರಿಕದಲ್ಲಿ ಸುಮಾರು 22 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದರು.

ಕೃಷಿ ಪ್ರಧಾನ ರಾಷ್ಟ್ರವಾದ ಭಾರತಕ್ಕೆ ಬೇಕಾದ ಅಗತ್ಯ ತಂತ್ರಜ್ಞಾನವನ್ನು ಒದಗಿಸುವಂತೆ ಪ್ರಧಾನಿ ಸಿಂಗ್ ಮಾಡಿದ ಮನವಿಗೆ ಒಬಾಮಾ ಪ್ರತಿಕ್ರಿಯಿಸಿ, ತಂತ್ರಜ್ಞಾನ ಪಡೆಯಿರಿ, ಉದ್ಯೋಗ ಸೃಷ್ಟಿಸಿ ಎಂದು ಮಾರ್ಮಿಕವಾಗಿ ನುಡಿದರು. ಒಟ್ಟಾರೆ ಯಾವುದೇ ವಿವಾದಿತ ಹೇಳಿಕೆಯಾಗಲಿ, ಒಪ್ಪಂದಕ್ಕಾಗಲಿ ಸಿಲುಕದೆ ನಾಜೂಕಾಗಿ ಒಬಾಮಾ ತಮ್ಮ ಪ್ರವಾಸವನ್ನು ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+