ರೆಡ್ಡಿಗಳೇನು ಇಂಟರ್ ನ್ಯಾಷನಲ್ ಲೀಡರ್ಸಾ?
ಶಿವಮೊಗ್ಗ,
ನ. 5 : ಬಳ್ಳಾರಿ ಗಣಿಧಣಿಗಳು ಏನು ಇಂಟರ್ ನ್ಯಾಷನಲ್ ಲೀಡರ್‌ಗಳೆ? ಎಷ್ಟೊಂದು ವಿಷಯಗಳಿವೆ. ಕಾರ್ಯಕಾರಿ ಸಮಿತಿ ನಿರ್ಣಯಗಳಿವೆ. ಅದರ ಬಗ್ಗೆ ಕೇಳುವುದನ್ನು ಬಿಟ್ಟು ಬರೀ ರೆಡ್ಡಿ ಸಹೋದರರ ಬಗ್ಗೆ ಕೇಳುತ್ತೀರಲ್ಲಾ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಎಸ್ ಈಶ್ವರಪ್ಪ ಲಕ್ಷ್ಮೀ ಪಟಾಕಿ ಹಚ್ಚಿದ್ದಾರೆ. id="toptextpromo">ನಗರಾಭಿವೃದ್ಧಿ
ಪ್ರಾಧಿಕಾರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈಶ್ವರಪ್ಪ ಮಾಧ್ಯಮದವರು ಜವಾಬ್ದಾರಿಯುತ ಪ್ರಶ್ನೆ ಕೇಳಬೇಕು. ಅದು ಬಿಟ್ಟು ಬರೀ ರೆಡ್ಡಿಗಳ ಬಗ್ಗೆ ಪ್ರಶ್ನೆ ಕೇಳುವುದು ತಪ್ಪು. ಸದ್ಯವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಅದಕ್ಕೂ ಮುನ್ನ ರಾಷ್ಟ್ರೀಯ ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದು ಮಾತನ್ನು ಬೇರೆ ಕಡೆ ಹೊರಳಿಸಿದರು. id='are-slot-1' class='oiad oi-axt oiadv'> id='top-searched-articles'>ಎಷ್ಟು
ಜನರನ್ನು ಸಂಪುಟಕ್ಕೆ ತೆಗೆದುಕೊಳ್ಳ ಬೇಕೆಂದು ಇನ್ನೂ ತೀರ್ಮಾನವಾಗಿಲ್ಲ. ಎಲ್ಲರೊಂದಿಗೆ ಚರ್ಚಿಸಿ ಒಮ್ಮತದ ನಿರ್ಧಾರ ತೆಗೆದು ಕೊಳ್ಳಲಾಗುವುದು. ಸರಕಾರವನ್ನು ಅಸ್ಥಿರಗೊಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಅಕ್ರಮ ಗಣಿಗಾರಿಕೆ ಹಣ ಬಳಸುತ್ತಿದ್ದಾರೆ. ಏನೇ ಕುತಂತ್ರ ಮಾಡಿದರೂ ಸರಕಾರ ಉರುಳಿಸಲು ಅವರಿಂದ ಸಾಧ್ಯವಿಲ್ಲ ಎಂದರು.











Click it and Unblock the Notifications