ಮಹಾ ಸಿಎಂ ಫ್ಲ್ಯಾಟ್ ಹಗರಣ ಸಿಬಿಐ ತನಿಖೆಗೆ

ತಮ್ಮ ಅತ್ತೆ ಹಾಗೂ ಇಬ್ಬರು ಸಂಬಂಧಿಕರಿಗೆ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕೊಡಿಸಿರುವ ಹಗರಣ ಬೆಳಕಿಗೆ ಬಂದ ನಂತರ, ಫ್ಲ್ಯಾಟ್ ಹಿಂತಿರುಗಿಸಲು ಮುಂದಾದ ಸಿಎಂ ಕ್ರಮಕ್ಕೆ ಹೈಕಮಾಂಡ್ ಛೀಮಾರಿ ಹಾಕಿದೆ. ಈ ಮೂಲಕ ಫ್ಲ್ಯಾಟ್ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವುದನ್ನು ಮಹಾ ಸಿಎಂ ಒಪ್ಪಿಕೊಂಡತ್ತಾಗಿದೆ. ಹೀಗಾಗಿ ಅಶೋಕ್ ಚವಾಣ್ ಗೆ ರಾಜೀನಾಮೆ ನೀಡುವಂತೆ ಸೋನಿಯಾಜಿ ಯಾವುದೇ ಕ್ಷಣದ್ದಲ್ಲಾದರೂ ಸೂಚಿಸುವ ಸಾಧ್ಯತೆಗಳಿವೆ.
ಈ ನಡುವೆ ಇಲ್ಲಿ ಫ್ಲ್ಯಾಟ್ ಹೊಂದಿದ್ದ ಸೇನೆಯ ನಿವೃತ್ತ ಅಧಿಕಾರಿಗಳು, ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ ಮರಳಿಸಲು ಮುಂದಾಗಿದ್ದಾರೆ. 'ಅವ್ಯವಹಾರ ನಡೆದಿದೆ ಎನ್ನಲಾದ ಜಾಗ ಸೇನಾ ವ್ಯಾಪ್ತಿಯಿಂದ ಹೊರಗಿದೆ. ಅಲ್ಲದೆ, ಅಲ್ಲಿ ನಿರ್ಮಿಸಿರುವ ಫ್ಲ್ಯಾಟ್ ಕಾರ್ಗಿಲ್ ಹುತಾತ್ಮರ ಕುಟುಂಬಕ್ಕೆ ಮೀಸಲಲ್ಲ' ಎಂದು ಅಶೋಕ್ ಚವಾಣ್ ಹೇಳಿದ್ದರು.
31 ಮಹಡಿಯ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕಾರ್ಗಿಲ್ ಸಮರದ ಹೀರೋಗಳು ಹಾಗೂ ಮೃತ ಯೋಧರ ಪತ್ನಿಯರಿಗೆ ನೀಡುವ ಸಲುವಾಗಿ ನಿರ್ಮಿಸಲಾಗಿತ್ತು, ಆದರೆ, ಇದನ್ನು ರಾಜಕಾರಣಿಗಳು ಹಾಗೂ ಅವರ ಸಂಬಂಧಿಗಳು, ನಿವೃತ್ತ ಸೇನಾಧಿಕಾರಿಗಳು ಬಳಸುತ್ತಿದ್ದರು. ಇದರಿಂದ ವಿವಾದ ಹುಟ್ಟಿಕೊಂಡಿತ್ತು.
ಸೇನೆಯ ಹಿರಿಯ ಅಧಿಕಾರಿಗಳಾದ ಎನ್ ಸಿ ವಿಜ್, ದೀಪಕ್ ಕಪೂರ್, ಮಾಧವೇಂದ್ರ ಸಿಂಗ್, ರಾಜಕಾರಣಿ ಶರದ್ ಪವಾರ್ ಸೇರಿ ಹಲವಾರು ಮುಖಂಡರ ಹೆಸರುಗಳು ಈ ಹಗರಣದಲ್ಲಿ ತಗುಲಿಕೊಂಡಿದೆ. ಮಹಾಸಿಎಂ ಸಂಬಂಧಿಕರು ಫ್ಲ್ಯಾಟ್ ಅನ್ನು ಹಿಂತಿರುಗಿಸಿದ್ದಾರೆಯೇ? ಪರಿಸರ ಕಾಳಜಿ ಇಲ್ಲದ ಕಟ್ಟಡಕ್ಕೆ ಪರವಾನಿಗಿ ದೊರೆತಿದ್ದು ಹೇಗೆ? ಬಿಜೆಪಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದಿರುವುದೇಕೆ? ಮುಂತಾದ ಪ್ರಶ್ನೆಗಳನ್ನು ಇಟ್ಟುಕೊಂಡು ದಾಖಲೆಗಳ ಪರೀಶೀಲನೆಯಲ್ಲಿ ಸಿಬಿಐ ತಂಡ ತೊಡಗಿದೆ.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS











Click it and Unblock the Notifications