ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿತೆರಿಗೆ ವ್ಯಾಪ್ತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು: ಬಿಬಿಎಂಪಿ

By Mahesh
|
Google Oneindia Kannada News

Mayor SK Nataraj
ಬೆಂಗಳೂರು, ಅ.30: ಆದಾಯ ತೆರಿಗೆ ಪಾವತಿಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಆಸ್ತಿತೆರಿಗೆ(property tax) ವ್ಯಾಪ್ತಿಗೆ ತರುವಂತೆ ಶುಕ್ರವಾರ ನಡೆದ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಪಕ್ಷಭೇದ ಮರೆತು ಸದಸ್ಯರು ಒತ್ತಾಯಿಸಿದರು. ಸದಸ್ಯರ ಒತ್ತಾಯಕ್ಕೆ ಮಣಿದು ಸಮಜಾಯಿಷಿ ನೀಡಿದ ಬಿಬಿಎಂಪಿ ಆಯುಕ್ತ ಸಿದ್ದಯ್ಯ, ಕೆಎಂಸಿ ಕಾಯ್ದೆಯಲ್ಲಿ ಉಲ್ಲೇಖಿಸಿರುವ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು, ಕಲ್ಯಾಣಮಂಟಪಗಳನ್ನು ಆಸ್ತಿತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ನಗರದಲ್ಲಿ 150 ಎಕರೆ ಹೊಂದಿದ್ದು, ದೊಡ್ಡ ಮೊತ್ತದ ಆದಾಯ ಕರವನ್ನು ಪಾವತಿಸುತ್ತಿರುವುದನ್ನು ಪಾಲಿಕೆ ಗಮನಿಸಿದೆ. ಇಂತಹ ಸಂಸ್ಥೆಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಕೈಸೇರಿದ ಬಳಿಕ ಸಭೆ ಅನುಮೋದನೆ ನೀಡಿದಲ್ಲಿ ಆಸ್ತಿತೆರಿಗೆ ಸಂಗ್ರಹಿಸಲು ಅಡ್ಡಿಯಿಲ್ಲ ಎಂದು ಸಿದ್ದಯ್ಯ ಸ್ಪಷ್ಟಪಡಿಸಿದರು.

ಡೊನೇಷನ್ ಹಾವಳಿ ತಪ್ಪಿಸಿ: ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಗುಣಶೇಖರ್, ಪಾಲಿಕೆಯ ಆದಾಯ ಸಂಗ್ರಹಕ್ಕೆ ಹಲವು ಅವಕಾಶಗಳಿದ್ದರೂ ಅಧಿಕಾರಿಗಳು ಹೊಸ ಚಿಂತನೆ ನಡೆಸಿಲ್ಲ. ಹಲವು ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂ. ಮೊತ್ತದ ಹಣವನ್ನು ಡೊನೇಷನ್ ಮೂಲಕ ಸಂಗ್ರಹಿಸುತ್ತಿರುವು ಸಮಾಜಸೇವೆಯೆ ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೂ ದನಿಗೂಡಿಸಿ ಹಣ ಮಾಡುವ ಸಂಸ್ಥೆಗಳಿಗೆ ರಿಯಾಯಿತಿ ನೀಡುವುದು ಬೇಡ ಎಂದು ಅಭಿಪ್ರಾಯಪಟ್ಟರು.

ಡಾ.ರಾಜ್ ಪ್ರತಿಮೆ ಸ್ಥಾಪನೆಗೆ ಭರವಸೆ: ಮೂರು ವರ್ಷ ಕಳೆದರೂ ಡಾ.ರಾಜ್‌ಕುಮಾರ್ ಪ್ರತಿಮೆ ಸ್ಥಾಪಿಸುವ ಕಾರ್ಯ ಕೈಗೊಂಡಿಲ್ಲ. ಇದರಿಂದ ರಾಜ್ ಪ್ರತಿಮೆ ದೂಳು ಹಿಡಿದಿದೆ. ಈಗಲಾದರೂ ಮೋಕ್ಷ ನೀಡಿಬೇಕೆಂದು ಬಿಜೆಪಿಯ ಎನ್.ಆರ್.ರಮೇಶ್ ದೂರಿಗೆ ಸ್ಪಂದಿಸಿದ ಮೇಯರ್ ಎಸ್. ಕೆ.ನಟರಾಜ್, ಶೀಘ್ರವೇ ಆ ಕುರಿತು ಕ್ರಮ ಕೈಗೊಂಡು ಪ್ರತಿಮೆ ಸ್ಥಾಪಿಸಲಾಗುವುದೆಂದು ಭರವಸೆ ನೀಡಿದರು.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X