ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಸಂಘಟನೆಗಳ ಹಿಡಿತದಲ್ಲಿ ಬಾಗಲಕೋಟೆ

By Mahesh
|
Google Oneindia Kannada News

Bagalkote bandh peaceful
ಬಾಗಲಕೋಟೆ, ಅ. 30: ಅಕ್ರಮವಾಗಿ ಕಟ್ಟಿರುವ ದೇಗುಲ, ಮಸೀದಿ, ಚರ್ಚ್ ಗಳನ್ನು ಕೆಡವಲು ಸುಪ್ರೀಂಕೋರ್ಟ್ ಆದೇಶ ನೀಡಿದರೂ, ಅದನ್ನು ಜಾರಿಗೊಳಿಸುವುದು ಸುಲಭದ ಮಾತಲ್ಲ. ಬಾಗಲಕೋಟೆಯಲ್ಲಿ ಆದದ್ದು ಅದೇ. ದೇವಾಲಯಗಳನ್ನು ತೆರವುಗೊಳಿಸುವವರ ಕೈ ಕತ್ತರಿಸುವವರಿಗೆ 1 ಲಕ್ಷ ರೂ.ಬಹುಮಾನ ನೀಡುವುದಾಗಿ ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ, ಸಾರ್ವಜನಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ದೇವಾಲಯ ತೆರವು ಕಾರ್ಯಾಚರಣೆ ನಡೆಸಿತ್ತು. ಆದರೆ, ಈ ಕಾರ್ಯಾಚರಣೆ ವಿರುದ್ಧ ಶುಕ್ರವಾರ ಬಂದ್ ಗೆ ಕರೆ ನೀಡಿ ಮಾತನಾಡಿದ ಜಗದೀಶ್ ಕಾರಂತ, ಹಿಂದೂಗಳ ಮೇಲಿನ ದೌರ್ಜನ್ಯ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ನಮ್ಮ ದೇವಸ್ಥಾನಗಳನ್ನು ತೆರವುಗೊಳಿಸುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಬಂಡೇಳಬೇಕು. ತೆರವು ಕಾರ್ಯಾಚರಣೆ ನಿಲ್ಲಿಸಿ, ಕೆಡವಿರುವ ದೇವಸ್ಥಾನಗಳನ್ನು ನವೆಂಬರ್ 15ರೊಳಗೆ ಪುನರ್ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಬಂದ್ ಯಶಸ್ವಿ:
ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಾಗಲಕೋಟೆ ಬಂದ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಗಲಕೋಟೆಯಲ್ಲಿ ಇಂದು ಕೂಡಾ ಬಂದ್ ಆಚರಿಸಲಾಗುತ್ತಿದೆ.

ಕಣಕ್ಕಿಳಿದ ಗೌರಿ ಲಂಕೇಶ್ : ಸುಪ್ರೀಂಕೋರ್ಟ್ ಆದೇಶಕ್ಕೆ ಅವಮಾನ ಮಾಡಿದ ಜಗದೀಶ್ ಕಾರಂತರನ್ನ್ನು ಕೂಡಲೇ ಬಂಧಿಸಬೇಕು ಎಂದು ಪತ್ರಕರ್ತೆ ಗೌರಿ ಲಂಕೇಶ್ ಆಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್ ಅನಧಿಕೃತ ದೇವಸ್ಥಾನ, ಪ್ರಾರ್ಥನ ಮಂದಿರಗಳ ತೆರವಿಗೆ ಆದೇಶಿಸಿದೆ. ಜಗದೀಶ್ ಕಾರಂತ ಹೇಳಿದಂತೆ ಮೊದಲು ಆದೇಶ ನೀಡಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಕೈ-ನಾಲಗೆ ಕತ್ತರಿಸಬೇಕಾಗುತ್ತದೆ ಎಂದರು.

ಭೂಮಿ ಕಬಳಿಸಲು ಚರಂಡಿ, ಪಾದಚಾರಿ ರಸ್ತೆಗಳನ್ನು ಬಿಡುತ್ತಿಲ್ಲ. ಯಾವುದೇ ಧಾರ್ಮಿಕ ಭಾವನೆಯಿಂದ ದೇವಸ್ಥಾನ ಸ್ಥಾಪಿಸುತ್ತಿಲ್ಲ. ಬದಲಿಗೆ, ಹಣ ಸುಲಿಗೆಗಾಗಿ. ಕೈ-ಕಾಲು, ನಾಲಿಗೆ ಕತ್ತರಿಸುವ ಹೇಳಿಕೆ ನೀಡಿದ ಜಗದೀಶ್ ಕಾರಂತರನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು ಎಂದು ಗೌರಿ ಲಂಕೇಶ್ ಒತ್ತಾಯಿಸಿದ್ದಾರೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X