ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ: ಖಾನ್ ಹೊರಕ್ಕೆ, ವರ್ತೂರು ಒಳಕ್ಕೆ?

By Mahesh
|
Google Oneindia Kannada News

Mumtaz Ali Khan
ಬೆಂಗಳೂರು, ಅ.29: ರಾಜ್ಯ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ರಾಜ್ಯದ ರಾಜಪುರೋಹಿತರು ಇಟ್ಟ ಮಹೂರ್ತಗಳಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಅನರ್ಹ ಶಾಸಕರ ಹಣೆಬರಹ ತೀರ್ಮಾನವಾಗುವವರೆಗೂ ತಾಳ್ಮೆಯಿಂದ ಇರುವಂತೆ ಸಂಪುಟ ಸ್ಥಾನ ಆಕಾಂಕ್ಷಿಗಳಿಗೆ ಸೂಚನೆಯಂತೂ ಹೊರಡಿಸಲಾಗಿದೆ. ಇಂದು ಗುಲ್ಬರ್ಗಾಕ್ಕೆ ತೆರಳಬೇಕಿದ್ದ ಸಿಎಂ, ಬೆಂಗಳೂರಿನಲ್ಲೇ ಉಳಿಯಲಿದ್ದಾರೆ. ಈ ನಡುವೆ ಸಂಪುಟದ ಇಬ್ಬರು ಸಚಿವರಿಗೆ ಕೊಕ್ ನೀಡುವ ಎಲ್ಲ ಸಿದ್ಧತೆಗಳು ನಡೆದಿವೆ.

'ಪಕ್ಷದಲ್ಲಿ ಯಾವುದೇ ಬಿಕ್ಕಟ್ಟಿಲ್ಲ. ಅತೃಪ್ತರಿಗೆ ಸ್ಥಾನ ಕಲ್ಪಿಸುವುದು ಅಸಾಧ್ಯ. ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ವರ್ತೂರು ಪ್ರಕಾಶ್ ಗೆ ಸ್ಥಾನ: ಪಕ್ಷೇತರ ಅಭ್ಯರ್ಥಿ ವರ್ತೂರು ಪ್ರಕಾಶ್ ಹಾಗೂ ರಾಜೂ ಗೌಡರಿಗೆ ಮುಂದಿನ ವಾರದಲ್ಲಿ ಸಚಿವ ಪಟ್ಟ ಸಿಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದ್ದು, ಇದಕ್ಕಾಗಿ ಮತ್ತಿಬ್ಬರು ಸಚಿವರ ತಲೆ ದಂಡಕ್ಕೆ ವೇದಿಕೆ ಸಿದ್ಧವಾಗಿದೆ. ಇತ್ತೀಚೆಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಅರಣ್ಯ ಖಾತೆ ಸಚಿವ ಸಿ.ಎಚ್. ವಿಜಯಶಂಕರ್ ಹಾಗೂ ವಕ್ಫ್-ಹಜ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಮ್ತಾಜ್ ಅಲಿಖಾನ್‌ರ ತಲೆ ದಂಡವನ್ನು ಪಕ್ಷ ಬಯಸಿದೆ ಎನ್ನಲಾಗಿದೆ.

16 ಮಂದಿ ಭಿನ್ನಮತೀಯ ಶಾಸಕರು ಸರಕಾರದ ವಿರುದ್ಧ ಬಂಡಾಯವೆದ್ದಾಗ ಸರಕಾರ ಸುಭದ್ರಗೊಳ್ಳಲು ಸಾಥ್ ನೀಡಿದ ವರ್ತೂರು ಪ್ರಕಾಶ್ ಹಾಗೂ ರಾಜೂ ಗೌಡರಿಗೆ ಸ್ಥಾನ ಕಲ್ಪಿಸಲು ಯಡಿಯೂರಪ್ಪ ನಿರ್ಧರಿಸಿದ್ದರು.

ವರಿಷ್ಠರೊಡನೆ ಚರ್ಚೆ: ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗಾಗಿ ಕಳೆದ ಕೆಲವು ದಿನಗಳಿಂದ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸುತ್ತಿರುವ ಯಡಿಯೂರಪ್ಪ, ಮುಂದಿನ ವಾರದಲ್ಲಿ ಒಳ್ಳೆ ಮಹೂರ್ತ ಸೂಚಿಸುವಂತೆ ಪುರೋಹಿತರ ಬೆನ್ನು ಬಿದ್ದಿದ್ದಾರೆ. ಪಕ್ಷದ ವರಿಷ್ಠರಿಂದ ಸೂಚನೆ ಸಿಗುವುದನ್ನು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರು ಸಚಿವರ ತಲೆದಂಡವಾಗುವುದು ಗ್ಯಾರಂಟಿ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X