ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ

By Mahesh
|
Google Oneindia Kannada News

HRA for govt staff revised
ಬೆಂಗಳೂರು, ಅ.29: ರಾಜ್ಯ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ, ರಾಜ್ಯೋತ್ಸವ ಹಾಗೂ ದೀಪಾವಳಿ ಕೊಡುಗೆ ನೀಡಿದೆ. ಸರ್ಕಾರಿ ನೌಕರರಿಗೆ ನೀಡುತ್ತಿರುವ ಮನೆ ಬಾಡಿಗೆ ಭತ್ಯೆ ದರಗಳನ್ನು ಹೆಚ್ಚಿಸಿ, ಗುರುವಾರ ಆದೇಶ ಹೊರಡಿಸಲಾಗಿದೆ.

2010ರ ಜನವರಿ 1ರಿಂದಲೇ ಈ ಆದೇಶ ಜಾರಿಗೆ ಬರಲಿದೆ. ವಿವಿಧ ವರ್ಗಗಳ ನಗರ/ಪಟ್ಟಣಗಳಲ್ಲಿ ಹೆಚ್ಚಳಗೊಂಡ ಮನೆ ಬಾಡಿಗೆ ಭತ್ಯೆ ಪರಿಷ್ಕೃತ ದರಗಳ ವಿವರ ಇಂತಿದೆ:

ಬೆಂಗಳೂರು ನಗರದಲ್ಲಿ ಪ್ರಸ್ತುತ ಮೂಲ ವೇತನದ ಶೇ 20ರಷ್ಟು ಮನೆ ಬಾಡಿಗೆ ಭತ್ಯೆ ನೀಡುತ್ತಿದ್ದು, ಶೇ 25ಕ್ಕೆ ಏರಿಸಲಾಗಿದೆ. ಬೆಂಗಳೂರು ನಗರದಲ್ಲಿ 'ಎ' ವರ್ಗ ಕೆಲಸ ಮಾಡುವ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಶೇ 5 ಹಾಗೂ ಇತರ ನಗರ ಮತ್ತು ಪಟ್ಟಣಗಳಲ್ಲಿ ಕೆಲಸ ಮಾಡುವ ನೌಕರರ ವೇತನವನ್ನು ಶೇ 1ರಷ್ಟು ಹೆಚ್ಚಿಸಲಾಗಿದೆ.

ಇದೇ ರೀತಿ ಬಿ-1, ಬಿ-2 ನಗರಗಳಲ್ಲಿ ಶೇ 15ರಷ್ಟು ಇದ್ದು, ಅದನ್ನು ಶೇ 16ಕ್ಕೆ ಹೆಚ್ಚಿಸಲಾಗಿದೆ. 'ಸಿ' ವರ್ಗದ ಪಟ್ಟಣಗಳಲ್ಲಿ ಶೇ 9 ರಷ್ಟು ಭತ್ಯೆ ಪಡೆಯುತ್ತಿದ್ದು, ಅದನ್ನು ಶೇ 10ಕ್ಕೆ ಹಾಗೂ 'ಡಿ' ವರ್ಗದ ಪಟ್ಟಣಗಳಲ್ಲಿ ಶೇ 6ರಿಂದ ಶೇ 7ಕ್ಕೆ ಏರಿಸಲಾಗಿದೆ. 'ಇ' ವರ್ಗದ ಪಟ್ಟಣಗಳಲ್ಲಿ ಶೇ 5ರಷ್ಟು ನೀಡುತ್ತಿದ್ದು, ಅದನ್ನು ಶೇ 6ಕ್ಕೆ ಹೆಚ್ಚಿಸಲಾಗಿದೆ.

ಕರ್ನಾಟಕದ ನಾಗರಿಕ ಸೇವಾ ನಿಯಮಗಳ ಉಪಬಂಧಗಳ ವ್ಯಾಪ್ತಿಯೊಳಗೆ ಬರುವ ಪೂರ್ಣಕಾಲಿಕ ಹಾಗೂ ಅರೆ ಕಾಲಿಕ ವೇತನಶ್ರೇಣಿಯಲ್ಲಿನ ಎಲ್ಲ ಸರ್ಕಾರಿ ನೌಕರರಿಗೂ ಈ ಮನೆಬಾಡಿಗೆ ಭತ್ಯೆ(HRA) ಹೆಚ್ಚಳ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X