ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಶಾಸಕರ ಅನರ್ಹತೆ : ಸರಕಾರಕ್ಕೆ ಜಯ

By Mrutyunjaya Kalmat
|
Google Oneindia Kannada News

Yeddyurappa and Eshwarappa rejoice after HC verdict
ಬೆಂಗಳೂರು, ಅ. 29 : ತೀವ್ರ ಕುತೂಹಲ ಕೆರಳಿದ್ದ ಬಿಜೆಪಿ 11 ಜನ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸ್ಪೀಕರ್ ಬೋಪಯ್ಯ ಅವರ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿ ವಿಜಿ ಸಭಾಹಿತ್ ಅವರು ಬಿಜೆಪಿ ಸ್ಪೀಕರ್ ಬೋಪಯ್ಯ ಅವರು 11 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮ ಸರಿ ಎಂದು ತೀರ್ಪು ನೀಡಿದ್ದಾರೆ. ಇದರೊಂದಿಗೆ ಬಿಜೆಪಿ ಸರಕಾರ ನಿಟ್ಟುಸಿರು ಬಿಟ್ಟಿದ್ದು, ಅನರ್ಹ ಶಾಸಕರು ಸೋಲುನುಭವಿಸಿದ್ದಾರೆ.

ಹಿನ್ನೆಲೆ : ಹನ್ನೊಂದು ಮಂದಿ ಶಾಸಕರ ಅನರ್ಹತೆಯ ಕುರಿತ ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಹಾಗೂ ನ್ಯಾ. ಎನ್. ಕುಮಾರ್ ಅವರಿದ್ದ ವಿಶೇಷ ವಿಭಾಗೀಯ ಪೀಠದಲ್ಲಿ ಅನರ್ಹತೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಭಿನ್ನ ನಿಲುವು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ತೀರ್ಪನ್ನು ಪರಾಮರ್ಶಿಸಿ ಅಂತಿಮ ಆದೇಶ ನೀಡುವಂತೆ ಮುಖ್ಯ ನ್ಯಾಯ ಮೂರ್ತಿ ನ್ಯಾ. ವಿ.ಜಿ. ಸಭಾಹಿತ್‌ರನ್ನು ಮೂರನೆ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದ್ದರು.

ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ 11 ಬಿಜೆಪಿ ಹಾಗೂ ಐವರು ಪಕ್ಷೇತರ ಶಾಸಕರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಹನ್ನೊಂದು ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಅ.18ಕ್ಕೆ ತೀರ್ಪು ಪ್ರಕಟಿಸಿತ್ತು.

ಈ ವಿಚಾರದಲ್ಲಿ ಪೀಠದ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿದ್ದರು. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಸ್ಪೀಕರ್ ಆದೇಶ ಸಂವಿಧಾನ ಬದ್ಧ ಎಂದು ಹೇಳಿದ್ದರೆ ನ್ಯಾ. ಎನ್. ಕುಮಾರ್ ಅದನ್ನು ಸಂವಿಧಾನ ಬಾಹಿರ ಎಂದು ಅಭಿಪ್ರಾಯಪಟ್ಟಿದ್ದರು. ಆ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೂರನೆ ನ್ಯಾಯಮೂರ್ತಿಗೆ ವರ್ಗಾಯಿಸಲಾಗಿತ್ತು. ಅ.20 ಮತ್ತು 21ರಂದು ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ವಿ.ಜಿ. ಸಭಾಹಿತ್ ತೀರ್ಪನ್ನು ಕಾಯ್ದಿರಿಸಿದ್ದರು.

ಅನರ್ಹಗೊಂಡ ಶಾಸಕರ ಪಟ್ಟಿ

* ಅರಭಾವಿ-ಬಾಲಚಂದ್ರ ಜಾರಕಿಹೊಳಿ
* ಕಾಗವಾಡ-ಭರಮಗೌಡ ಕಾಗೆ
* ಬಸವನ ಬಾಗೇವಾಡಿ- ಎಸ್.ಕೆ.ಬೆಳ್ಳುಬ್ಬಿ
* ಇಂಡಿ-ಡಾ.ಸಾರ್ವಭೌಮ ಬಗಲಿ
* ಕಾರವಾರ-ಆನಂದ್ ವಸಂತ ಅಸ್ನೋಟಿಕರ್
* ದೇವದುರ್ಗ- ಕೆ.ಶಿವನ ಗೌಡ ನಾಯಕ್
* ಸಾಗರ- ಗೋಪಾಲಕೃಷ್ಣ ಬೇಳೂರು
* ಕೆಜಿಎಫ್-ವೈ.ಸಂಪಂಗಿ
* ನೆಲಮಂಗಲ-ಎಂ.ವಿ.ನಾಗರಾಜು
* ಚಾಮರಾಜ(ಮೈಸೂರು) -ಎಚ್.ಎಸ್. ಶಂಕರಲಿಂಗೇಗೌಡ
* ಕೊಳ್ಳೇಗಾಲ-ಜಿ. ಎನ್.ನಂಜುಂಡಸ್ವಾಮಿ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X