ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ನಿಮ್ಮ ಭಾಷೆಯಲ್ಲಿ ಷೇರುಪೇಟೆ ಸುದ್ದಿ

By Mahesh
|
Google Oneindia Kannada News

Govt. to bring financial info in regional languages
ಮುಂಬೈ, ಅ.27: ಷೇರು ಪೇಟೆ ಸುದ್ದಿ, ಕಂಪೆನಿಗಳ ಒಳಗೂ ಹೊರಗಿನ ಸುದ್ದಿ, ಮ್ಯೂಚಿಯಲ್ ಫಂಡ್, ತೆರಿಗೆ, ಆದಾಯ, ವ್ಯಯ, ವಾಣಿಜ್ಯ, ವಹಿವಾಟು, ಬ್ಯಾಂಕಿಂಗ್ ಎಲ್ಲವೂ ಸಂಪೂರ್ಣ ನಿಮ್ಮದೇ ಭಾಷೆಯಲ್ಲಿ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಎಲ್ಲವೂ ಸರಿಯಾಗಿ ನಡೆದರೆ ಏಪ್ರಿಲ್ 2011 ವೇಳೆಗೆ ಷೇರು ಪೇಟೆ ವ್ಯವಹಾರಗಳ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಬಹುದು. ಅಲ್ಲದೆ, ವಾಣಿಜ್ಯ ಲೋಕದ ವ್ಯವಹಾರದ ಆಗು ಹೋಗುಗಳನ್ನು ಭಾರತದ 16 ಪ್ರಮುಖ ಭಾಷೆಗಳಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗುವುದು.

ವಾಣಿಜ್ಯ ವಹಿವಾಟು ಸಂಬಂಧಿತ ಸಾವಿರಾರು ಪದಗಳ ಅನುವಾದಿಸುವುದು, ವಲಯ ಕೇಂದ್ರಿತ ಪದಗಳ ದಾಖಲೀಕರಣ ಮುಂತಾದವುಗಳ ಬಗ್ಗೆ Institute of Chartered Accountants of India(ICAI) ಈಗಾಗಲೇ ಕಾರ್ಯ ಆರಂಭಿಸಿದೆ. ಹೊಸ ವಿಧಾನ ಗ್ರಾಹಕ ಸ್ನೇಹಿಯಾಗಿದ್ದು, ಆಂಗ್ಲ ಭಾಷೆಯಲ್ಲಿರುವ ಕಂಪೆನಿಗಳ ಪ್ರಕಟಣೆಯನ್ನು ಬಂಡವಾಳ ಹೂಡಿಕೆದಾರರು ತಮ್ಮ ಪ್ರಾದೇಶಿಕ ಭಾಷೆಯಲ್ಲೇ ಓದಿಕೊಳ್ಳಬಹುದಾಗಿದೆ.

ಷೇರುಪೇಟೆಯಲ್ಲೂ ಈ ಬಗೆಯ ತಂತ್ರಾಂಶ ಅಳವಡಿಸಲಾಗುವುದು ಹಾಗೂ ಕಂಪೆನಿಗಳ ತ್ರೈಮಾಸಿಕ ವರದಿಗಳನ್ನು, ಷೇರುಪೇಟೆ ವ್ಯವಹಾರವನ್ನು ಸಮರ್ಥವಾಗಿ, ಸರಳವಾಗಿ ಅರ್ಥಮಾಡಿಕೊಳ್ಳಬಹುದಾದ ವ್ಯವಸ್ಥೆ ಸೃಷ್ಟಿಯಾಗಲಿದೆ ಎಂದು IRIS ಆರ್ಥಿಕ ಸೇವಾ ಸಂಸ್ಥೆಯ ಸಿಇಒ ಎಸ್ ಸ್ವಾಮಿನಾಥನ್ ಹೇಳುತ್ತಾರೆ.

ಇದರಿಂದ ಕಂಪೆನಿಗಳ ಮೇಲೆ ಆರ್ಥಿಕ ಹೊರೆ ಬೀಳುವುದಿಲ್ಲ. ಬಾಂಬೆ ಸ್ಟಾಕ್ ಎಕ್ಸ್ ಚೆಂಜ್ (ಬಿಎಸ್ ಇ) ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಂಪೆನಿಗಳ ಆರ್ಥಿಕ ಇತಿಹಾಸವನ್ನು ಕೆದಕಿ ಎಲ್ಲವನ್ನೂ ಪ್ರಾದೇಶಿಕ ಭಾಷೆ ತರುವ ಯೋಜನೆ ಹೊಂದಿದೆ ಎಂದು ಸ್ವಾಮಿನಾಥನ್ ಹೇಳಿದರು. ಒಟ್ಟಿನಲ್ಲಿ ಇದು ಗ್ರಾಹಕ ಸ್ನೇಹಿ ಯೋಜನೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಒನ್ ಇಂಡಿಯಾ ಸಮೂಹ ಕೂಡಾ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ವಾಣಿಜ್ಯಲೋಕದ ಸುದ್ದಿ, ವಿಶ್ಲೇಷಣೆಯುಳ್ಳ ತಾಣವನ್ನು ಪರಿಚಯಿಸಿದೆ. ಮುಂಬರುವ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕೂಡಾ ಷೇರುಪೇಟೆ ಸುದ್ದಿಗಳನ್ನು ಹೊರತರಲು ಪ್ರಯತ್ನ ನಡೆದಿದೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X