ಸಿಎಂ ಪುತ್ರನಿಂದ ಮೈಸೂರು ಶಿವಮೊಗ್ಗ ರೈಲಿಗೆ ಬ್ರೇಕ್

ಮೈಸೂರಿನಿಂದ ಮುಂಜಾನೆ ಹೊರಟು ಮಧ್ಯಾಹ್ನ ಶಿವಮೂಗ್ಗ ತಲುಪಿ ಮತ್ತೆ ಸಂಜೆ ವೇಳೆಗೆ ಶಿವಮೊಗ್ಗದಿಂದ ಹೊರಟು ರಾತ್ರಿ ಮೈಸೂರು ತಲುಪುವಂತೆ ಪ್ರಕಟಿಸಿರುವ ವೇಳಾಪಟ್ಟಿ ಈ ಭಾಗದ ಜನರಿಗೆ ಬಹುಪಯೋಗಿ. ಆದರೆ ಜನರಿಂದಲೇ ಆಯ್ಕೆಯಾದ ಸಂಸದರು ಜನರ ಹಿತಾಸಕ್ತಿ ಪರಿಗಣಿಸದೆ ರೈಲು ಶಿವಮೊಗ್ಗದಿಂದ ಮುಂಜಾನೆ ಹೊರಡಬೇಕೆಂದು ಹಠ ಹಿಡಿದಿರುವುದು ಈಗ ಅನಗತ್ಯ ಗೊಂದಲಕ್ಕೆ ದಾರಿ ಮಾಡಿಕೊಟ್ಟಿದೆ.
ಮೈಸೂರು ಮತ್ತು ಶಿವಮೊಗ್ಗ ಸಂಸದರ ಶೀಥಲ ಸಮರ ಈ ವಿಳಂಬಕ್ಕೆ ಕಾರಣ ಎಂದೂ ಹೇಳಲಾಗಿದೆ. ರೈಲ್ವೆ ಇಲಾಖೆ ವೇಳಾಪಟ್ಟಿ ಪ್ರಕಟಿಸಿದ್ದರೂ ಅದನ್ನು ಬದಲಿಸುವಂತೆ ರಾಘವೇಂದ್ರ ರೈಲ್ವೆ ಸಚಿವ ಕೆ ಎಚ್ ಮುನಿಯಪ್ಪ ಅವರ ಮೇಲೆ ಒತ್ತಡ ತಂದಿರುವ ಹಿನ್ನಲೆಯಲ್ಲಿ ರೈಲು ಆರಂಭ ವಿಳಂಬಕ್ಕೆ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ಇತ್ತ ಮೈಸೂರು - ಶಿವಮೊಗ್ಗ ನಡುವಿನ ರೈಲ್ವೆ ವೇಳಾಪಟ್ಟಿ ಸಮಸ್ಯೆಯನ್ನು ಶೀಘ್ರಇತ್ಯರ್ಥ ಪಡಿಸುವುದಾಗಿ ಮೈಸೂರು ಸಂಸದ ಎಚ್ ವಿಶ್ವನಾಥ್ ಭರವಸೆ ನೀಡಿದ್ದಾರೆ.
ರೈಲ್ವೆ ಇಲಾಖೆ ಪ್ರಕಟಿಸಿರುವ ವೇಳಾಪಟ್ಟಿ : ಮೈಸೂರಿನಿಂದ ಬೆಳಿಗ್ಗೆ 6 ಗಂಟೆ ಹೊರಟು ಮಧ್ಯಾಹ್ನ 11.30 ಕ್ಕೆ ಶಿವಮೊಗ್ಗ ತಲುಪುತ್ತದೆ. ಸಂಜೆ 4.30 ಕ್ಕೆ ಶಿವಮೊಗ್ಗ ದಿಂದ ಹೊರಡುವ ರೈಲು ರಾತ್ರಿ 9.30 ಕ್ಕೆ ಮೈಸೂರು ಆಗಮಿಸಲಿದೆ.











Click it and Unblock the Notifications