ಉಪನ್ಯಾಸಕಿಯನ್ನು ಮಧುಮಂಚಕ್ಕೆ ಕರೆದ ಪ್ರಿನ್ಸಿಪಾಲ್

ನೃಪತುಂಗ ರಸ್ತೆಯಲ್ಲಿರುವ ವೈಎಂಸಿಎ ಕಾಲೇಜು ಪ್ರಾಂಶುಪಾಲ ಮಾಲ್ ಕ್ಯೂಸ್(52) ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಕಾಲೇಜಿನ ಉಪನ್ಯಾಸಕಿ ರಾಧಾ(ಹೆಸರು ಬದಲಾಯಿಸಲಾಗಿದೆ) ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ 5 ವರ್ಷಗಳಿಂದ ಉಪನ್ಯಾಸಕಿ ಆಗಿ ಸೇವೆ ಸಲ್ಲಿಸುತ್ತಿದ್ದು, ಆಗಿನಿಂದಲೂ ಪ್ರಾಂಶುಪಾಲರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಬಾಯಿ ಬಿಟ್ಟರೆ ಕೆಲಸದಿಂದ ತೆಗೆಯುವುದಾಗಿ ಎಚ್ಚರಿಸಿದ್ದರು. ಕಚೇರಿಯಲ್ಲಿ ಒಬ್ಬಳೆ ಇರುವಾಗ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುವುದಲ್ಲದೇ ಅವಾಚ್ಯ ಶಬ್ಧಗಳಿಂದ ಮಾತನಾಡಿಸುತ್ತಿದ್ದರು. ಆತನೊಂದಿಗೆ ಸಂಬಂಧ ಬೆಳಸಲು ನಿರಾಕರಿಸಿದ್ದರಿಂದ ಕೆಲಸದಿಂದ ತೆಗೆದಿದ್ದಾರೆ. ಆದ್ದರಿಂದ ತನಗೆ ಅನ್ಯಾಯವಾಗಿದೆ ಎಂದು ಉಪನ್ಯಾಸಕಿ ದೂರಿನಲ್ಲಿ ತಿಳಿಸಿದ್ದಾರೆ.
ಕಾಮುಕ ಶಿಕ್ಷಕನಿಗೆ ಬಾರಿಸಿದ ಜಯ ಕರ್ನಾಟಕ












Click it and Unblock the Notifications