ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿ ಜೈಲಿಗೆ ಹಾಕಿದ್ರು, ಅಲ್ಲಿ ಹಾರ ಹಾಕಿದ್ರು

By Mahesh
|
Google Oneindia Kannada News

Hariprasad, source: NDTV
ವಾಷಿಂಗ್ಟನ್, ಅ.22: ಎಲೆಕ್ಟ್ರಾನಿಕ್ ಮತಯಂತ್ರ(EVM) ಗಳಲ್ಲಿನ ದೋಷ ತೋರಿಸಿ, ಬಂಧನಕ್ಕೊಳಗಾಗಿದ್ದ ಸಂಶೋಧಕ ಹರಿಪ್ರಸಾದ್ ಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಷನ್(EFF) ಹರಿಪ್ರಸಾದ್ ಸೇರಿದಂತೆ ನಾಲ್ವರಿಗೆ ಪ್ರಶಸ್ತಿ ಘೋಷಿಸಿದೆ. ನವೆಂಬರ್ 8 ರಂದು ಭಾರತದ ಹರಿಪ್ರಸಾದ್ ಸೇರಿದಂತೆ ನಾಲ್ವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಹೈದರಾಬಾದ್ ಮೂಲದ ಹರಿಪ್ರಸಾದ್ ಕೆ ವೆಮೂರು ವಿದ್ಯುನ್ಮಾನ ಮತಯಂತ್ರ ತಿರುಚುವಿಕೆ, ಅಕ್ರಮ ಕೃತ್ಯಗಳ ಬಗ್ಗೆ ಅ.5 ರಂದು ಚಿಕಾಗೋನಲ್ಲಿ ಉಪನ್ಯಾಸ ನೀಡಿದ್ದರು. ಮುಂಬೈನ ಕಲೆಕ್ಟರ್ ಕಚೇರಿಯೊಂದರಿಂದ ಇವಿಎಂ ಕದ್ದ ಆರೋಪದ ಮೇಲೆ ವಿದ್ಯುನ್ಮಾನ ಸುರಕ್ಷತಾ ತಜ್ಞ ಹರಿಪ್ರಸಾದ್ ಅವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ವರ್ಷಗಳ ಕಾಲ ಸಂಶೋಧನೆ ನಡೆಸಿ 'ಇವಿಎಂಗಳ ಮೂಲಕ ಅಕ್ರಮ ನಡೆಸಲು ಸಾಧ್ಯ' ಎಂದು ನಿರೂಪಿಸಿದ ಹರಿಪ್ರಸಾದ್ ಅವರ ಮಾತಿಗೆ ಯಾವೊಬ್ಬ ಸರ್ಕಾರಿ ಅಧಿಕಾರಿಗಳು ಬೆಲೆ ಕೊಟ್ಟಿರಲಿಲ್ಲ. ಆದರೆ, ಪಾರದರ್ಶಕ ಹಾಗೂ ಸುರಕ್ಷಿತ ಮತದಾನ ವ್ಯವಸ್ಥೆಯ ಕಲ್ಪನೆ ಹೊತ್ತಿರುವ ಹರಿಪ್ರಸಾದ್ ಹಾಗೂ ಅವರ ತಂಡ, ಇವಿಎಂಗಳ ಲೋಪದೋಷಗಳ ಬಗ್ಗೆ ಜಗತ್ತಿಗೆ ಸಾರಿ ಹೇಳಿದ್ದಾರೆ ಇದು ಉತ್ತಮ ಕೆಲಸ ಎಂದು ಇಎಫ್ ಎಫ್ ಸಂಸ್ಥೆ ಹೇಳಿದೆ.

EFFನ ಪಯೋನಿರ್ ಪ್ರಶಸ್ತಿಗಳನ್ನು 1992ರಿಂದ ನೀಡಲಾಗುತ್ತಿದೆ. ವಿದ್ಯುನ್ಮಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿ ಅಥವಾ ಸಂಸ್ಥೆಗೆ ಈ ಗೌರವ ಲಭಿಸಲಿದೆ. ಈ ಮುಂಚೆ ಈ ಗೌರವ ಪಡೆದ ಪ್ರಮುಖರಲ್ಲಿವರ್ಲ್ಡ್ ವೈಡ್ ವೆಬ್(WWW) ಸಂಶೋಧಕ ಟಿಮ್ ಬೆರ್ನೆರ್ಸ್ ಲಿ, ಸುರಕ್ಷಿತಾ ತಜ್ಞ ಬ್ರೂಸ್ ಸ್ಕೈನರ್, ಮೊಜಿಲ್ಲಾ ಫೌಂಡೇಷನ್ ಹಾಗೂ ಅದರ ಮುಖ್ಯಸ್ಥ ಮಿಚೈಲ್ ಬೇಕರ್ ಸೇರಿದ್ದಾರೆ. ಭಾರತದಲ್ಲಿ ಅವಮಾನಕ್ಕೀಡಾದ ಸಂಶೋಧಕನಿಗೆ ಅಮೆರಿಕದಲ್ಲಿ ಗೌರವಲ್ ಅಭಿಸಿದೆ.

ವಿಡಿಯೋಗಳು: ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X