ಕೊಲೆ ಕೇಸ್: ಸಲಿಂಗಿ ಸೌದಿ ರಾಜಕುಮಾರ ಅಪರಾಧಿ

32 ರ ಹರೆಯದ ಬಂಡಾರ್ ಅಬ್ದುಲ್ ಅಜೀಜ್ ಹತ್ಯೆಗೈದ ಸೌದಿ ರಾಜಕುಮಾರ ಸೌದ್ ಅಬ್ದುಲ್ ಅಜೀಜ್ ಬಿನ್ ನಾಸರ್ ಅಲ್ ಸೌದ್ ಶಿಕ್ಷೆ ಪ್ರಮಾಣ ಪ್ರಕಟಗೊಂಡ ನಂತರವೂ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಕೋರ್ಟ್ ನೀಡಿದ ಸಂದರ್ಭದಲ್ಲಿ ರಾಜಕುಮಾರನ ತಂದೆ ಅಬ್ದುಲ್ ಅಜೀಜ್ ಉಪಸ್ಥಿತರಿದ್ದರು.
ಸೆಂಟ್ರಲ್ ಲಂಡನ್‌ನ ಲ್ಯಾಂಡ್‌ಮಾರ್ಕ್ ಹೊಟೇಲ್‌ನಲ್ಲಿ ಬಂಡಾರ್ ಅಬ್ದುಲ್‌ಅಜೀಜ್‌ನ ಶವ ಮಾರಕಾಸ್ತ್ರಗಳಿಂದ ಹೊಡೆಯಲ್ಪಟ್ಟ ಸ್ಥಿತಿಯಲ್ಲಿ ಕಳೆದ ಫೆಬ್ರವರಿಯಲ್ಲಿ ಪತ್ತೆಯಾಗಿತ್ತು.ಹತ್ಯೆಗೂ ಮುನ್ನ ಇವರಿಬ್ಬರೂ ಲೈಂಗಿಕ ಸಂಬಂಧಗಳನ್ನು ಹೊಂದಿದ್ದರು. ಇದು ಸಿಸಿಟಿವಿ ಕೆಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications