ಹಾಸನ ವೈದ್ಯಕೀಯ ಕಾಲೇಜ್ ಸಿಬ್ಬಂದಿಗಳಿಗೆ ಜಯ

Karnataka High Court
ಬೆಂಗಳೂರು, ಅ. 21 : ಹಾಸನ ವೈದ್ಯಕೀಯ ಕಾಲೇಜಿನ ಬೋಧಕೇತರ ಸಿಬ್ಬಂದಿ ನೇಮಕಾತಿ ಸಕ್ರಮವೆಂದು ರಾಜ್ಯ ಹೈಕೋರ್ಟ್ ಇಂದು ಆದೇಶ ಹೊರಡಿಸಿದೆ. ಅಕ್ರಮ ನೇಮಕಾತಿ ಎಂದು ಸಿಬ್ಬಂದಿಯನ್ನು ಏಕಾಏಕಿ ವಜಾಗೊಳಿಸಿದ್ದ ಸರಕಾರದ ಕ್ರಮಕ್ಕೆ ನ್ಯಾಯಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಕೆಲಸ ಕಳೆದುಕೊಂಡು ಕಂಗಾಲಾಗಿದ್ದ ಉದ್ಯೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಸಾಮಾಜಿಕ ನ್ಯಾಯ ಗಾಳಿಗೆ ತೂರಲಾಗಿದೆ ಜೊತೆಗೆ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಹಾಸನ ವೈದ್ಯಕೀಯ ಕಾಲೇಜಿನ ಬೋಧಕೇತರ ಸಿಬ್ಬಂದಿ ನೇಮಕಾತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ರದ್ದುಗೊಳಿಸಿದ್ದರು. ಕೆಲಸ ಕಳೆದುಕೊಂಡ ಉದ್ಯೋಗಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಸರಕಾರ ನ್ಯಾಯಾಲಯಕ್ಕೆ ಎಲ್ಲ ದಾಖಲೆಗಳನ್ನು ಒದಗಿಸಿತ್ತು. ನೇಮಕಾತಿಗೆ ಸೂಕ್ತ ಪ್ರಚಾರ ನೀಡದೆ ಇರುವುದು. ಅರ್ಹತಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೂ ಕೃಪಾಂಕ ಮತ್ತು ಸಂದರ್ಶನ ಅಂಕಗಳನ್ನು ಹೆಚ್ಚಾಗಿ ನೀಡಿ ಸಿಬ್ಬಂದಿ ನೇಮಕಾತಿ ಮಾಡಿರುವುದು. ನಿಯಮ ಬಾಹಿರವಾಗಿ ಕೃಪಾಂಕ ಮತ್ತು ಸೇವಾ ಅಂಕಗಳನ್ನು ನೀಡಿರುವುದು ಹೀಗೆ ಹಲವು ಅಂಶಗಳನ್ನು ಸರಕಾರ ನ್ಯಾಯಾಲಯಕ್ಕೂ ಸಲ್ಲಿಸಿದ್ದರು. ಹಾಸನದ ವೈದ್ಯಕೀಯ ಕಾಲೇಜಿನ 281 ಮಂದಿ ಸಿಬ್ಬಂಗಳ ನೇಮಕಾತಿ ಸಕ್ರಮ ಎಂದು ನ್ಯಾಯಾಲಯ ಹೇಳಿದೆ.

ಮೈಸೂರು ವೈದ್ಯಕೀಯ ಕಾಲೇಜಿನ 84 ಬೋಧಕೇತರ ಸಿಬ್ಬಂದಿಗಳ ನೇಮಕಾತಿಗಳ 37 ಸಿಬ್ಬಂದಿಗಳ ನೇಮಕಾತಿ ಸಕ್ರಮ ಎಂದು ಹೇಳಿದ್ದರೆ, ಉಳಿದ 47 ಮಂದಿಯ ನೇಮಕಾತಿಯನ್ನು ಅಕ್ರಮ ಎಂದು ನ್ಯಾಯಾಲಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+