ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಬೇಕಿದ್ದರೆ ಕಂಪ್ಯೂಟರ್ ಜ್ಞಾನ ಅಗತ್ಯ

By Mrutyunjaya Kalmat
|
Google Oneindia Kannada News

Supreme Court
ನವದೆಹಲಿ, ಅ. 15 : ಸರಕಾರದ ಬಹುತೇಕ ಇಲಾಖೆಗಳು ಈಗಾಗಲೇ ಕಂಪ್ಯೂಟರ್ ಮಯವಾಗಿರುವುದರಿಂದ ಸರಕಾರಿ ಕೆಲಸಕ್ಕೆ ನೇಮಕವಾಗುವ ವ್ಯಕ್ತಿಗಳು ಕೂಡಾ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಕಂಪ್ಯೂಟರ್ ಜ್ಞಾನ ಹೊಂದಿರುವವರನ್ನು ಮಾತ್ರ ನ್ಯಾಯಾಧೀಶರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂಬ ನಿರ್ದೇಶನವನ್ನು ಸಹ ನೀಡಿದೆ.

ನ್ಯಾಯಮೂರ್ತಿ ಮುಕುಂದನ್ ಶರ್ಮಾ ಮತ್ತು ಎ ಆರ್ ದವೆ ಅವರನ್ನೊಳಗೊಂಡ ವಿಭಾಗೀಯ ಪೀಠ, ಮುಂದಿನ ದಿನಗಳಲ್ಲಿ ನ್ಯಾಯಾಧೀಶರಾಗಿ ನೇಮಕ ಆಗುವ ವ್ಯಕ್ತಿಗಳಿಗೆ ಕಂಪ್ಯೂಟರ್ ನ ಸಾಮಾನ್ಯ ಜ್ಞಾನ ಅವಶ್ಯ. ಕಂಪ್ಯೂಟರ್ ಜ್ಞಾನ ಹೊಂದಿಲ್ಲದವರನ್ನು ನೇಮಕ ಮಾಡಿಕೊಳ್ಳಬಾರದು ಎಂದು ಆದೇಶಿಸಿದ್ದಾರೆ.

ಸಿವಿಲ್ ನ್ಯಾಯಾಧೀಶರ ಆಯ್ಕೆ ಬಯಸಿ ಉತ್ತರಖಂಡ ಸರಕಾರದ ನ್ಯಾಯಾಂಗ ಆಡಳಿತ ಸೇವಾ ಪರೀಕ್ಷೆ ತೆಗೆದುಕೊಂಡಿದ್ದ ಅಲ್ಲಿನ ವಿಜೇಂದ್ರ ಕುಮಾರ್ ವರ್ಮಾ ಎಂಬುವವರು ಸಿಇಟಿ ಪರೀಕ್ಷೆಯಲ್ಲಿ ಪಾಸಾಗಿ ನಂತರ ನಡೆಸಲಾಗಿದ್ದ ಕಂಪ್ಯೂಟರ್ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಫೇಲಾಗಿದ್ದರು. ಹೀಗಾಗಿ ಕಂಪ್ಯೂಟರ್ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಫೇಲಾಗಿದ್ದ ವರ್ಮಾ ಅವರ ಆಯ್ಕೆಯನ್ನು ಉತ್ತರಖಂಡ ಸರಕಾರ ತಡೆಹಿಡಿದಿತ್ತು.

ಇದನ್ನು ಪ್ರಶ್ನಿಸಿದ್ದ ವರ್ಮಾ ಅಲ್ಲಿನ ಹಾಕೋರ್ಟ್ ಮೊರೆಹೋಗಿದ್ದರು. ಆದರೆ, ಕಂಪ್ಯೂಟರ್ ಜ್ಞಾನ ಅಗತ್ಯ ಎಂದು ಹೇಳಿ ನ್ಯಾಯಾಲಯ ಇವರ ಅರ್ಜಿಯನ್ನು ತಿರಸ್ಕರಿಸಿತ್ತು. ವರ್ಮಾ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಕೂಡಾ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡಬಯಸುವವರಿಗೆ ಕಂಪ್ಯೂಟರ್ ಜ್ಞಾನ ಅಗತ್ಯ ಎಂದು ಹೇಳುವ ಮೂಲಕ ಉತ್ತರಖಂಡ ಸರಕಾರದ ಕ್ರಮವನ್ನು ಎತ್ತಿಹಿಡಿದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X