ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ತಾತ್ಕಾಲಿಕ ಸ್ಥಾನ

By Rajendra
|
Google Oneindia Kannada News

India elected to U.N. Security Council
ನ್ಯೂಯಾರ್ಕ್, ಅ .13 : ಹತ್ತೊಂಬತ್ತು ವರ್ಷಗಳ ಸುದೀರ್ಘ ಸಮಯದ ಬಳಿಕ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯಬೇಕೆಂಬುದು ಭಾರತದ ಹಲವಾರು ವರ್ಷಗಳ ಕನಸಾಗಿದೆ.

ವಿಶ್ವದ ದೊಡ್ಡಣ್ಣರ ಸಾಲಿನಲ್ಲಿ ಗುರುತಿಸಿಕೊಳ್ಳುವ ಪ್ರಯತ್ನಕ್ಕೆ ಈಗ ತಾತ್ಕಾಲಿಕ ಯಶಸ್ಸು ಸಿಕ್ಕಿದೆ. ಮಂಗಳವಾರ (ಅ .12) ನಡೆದ ಮತದಾನದಲ್ಲಿ ಭಾರತಕ್ಕೆ 128 ಮತಗಳ ಅಗತ್ಯವಿತ್ತು. ಆದರೆ ಭಾರತ ಅಂತಿಮವಾಗಿ 187 ಮತಗಳನ್ನು ಗಿಟ್ಟಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ. 1992 ರಲ್ಲಿ ಭಾರತಕ್ಕೆ ತಾತ್ಕಾಲಿಕ ಸದಸ್ಯತ್ವ ದೊರಕಿತ್ತು. ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯಲು ತಾತ್ಕಾಲಿಕ ಸದಸ್ಯತ್ವ ಮಹತ್ತರ ಹೆಜ್ಜೆ ಎಂದು ಬಣ್ಣಿಸಲಾಗಿದೆ.

1966 ರಲ್ಲಿ ಜಪಾನ್ 100 ಮತಗಳ ಬೃಹತ್ ಮತಗಳ ಅಂತರದಿಂದ ಭಾರತವನ್ನು ಹಿಂದಿಕ್ಕಿತ್ತು. ಈ ಸಲ ಈ ಸ್ಥಾನವನ್ನು ಜಪಾನ್ ನಿಂದ ಭಾರತಕಸಿದುಕೊಂಡಿದೆ. ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಕಳೆದ ತಿಂಗಳು ಹತ್ತು ದಿನ ನ್ಯೂಯಾರ್ಕ್ ನಲ್ಲಿದ್ದು 56 ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 192 ಸದಸ್ಯ ರಾಷ್ಟ್ರಗಳ ಮೂರನೇ ಎರಡರಷ್ಟು ಅಂದರೆ 128 ರಾಷ್ಟ್ರಗಳ ಬೆಂಬಲ ಪಡೆಯ ಬೇಕಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X