ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಧಣಿಗಳ ಮನೆಯಲ್ಲಿ ಚನ್ನಪಟ್ಟಣ ಶಾಸಕ ?

By Mahesh
|
Google Oneindia Kannada News

MLA MC Ashwath
ಚನ್ನಪಟ್ಟಣ, ಅ. 12 : ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲೂ ಹಾಜರಿರದೆ, ದೂರವಾಣಿ ಸಂಪರ್ಕಕ್ಕೂ ಸಿಗದ ಚನ್ನಪಟ್ಟಣದ ಜೆಡಿಎಸ್ ಶಾಸಕ ಎಂ ಸಿ ಆಶ್ವಥ್ ಆಪರೇಷನ್ ಕಮಲಕ್ಕೆ ಬಲಿಯಾಗಿ ಬಳ್ಳಾರಿಯಲ್ಲಿದ್ದಾರೆಂದು ಹೇಳಲಾಗುತ್ತಿದೆ.ಅಶ್ವಥ್ ಅವರ ಮೊಬೈಲ್ ಟ್ರಾಪ್ ಮಾಡಿ ಅವರ ವಾಸ್ತವ್ಯದ ಗುಟ್ಟನ್ನು ತಿಳಿಯಲು ಆಪ್ತ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಳ್ಳಬೇಕಾಯಿತು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಆದರೆ, ಇನ್ನೊಂದು ಮೂಲಗಳ ಪ್ರಕಾರ, ಅಶ್ವಥ್ ತಮಿಳುನಾಡಿನಲ್ಲಿದ್ದು ದೂರವಾಣಿಯಲ್ಲಿ ನನ್ನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಮತ್ತು ಮಂಗಳವಾರದ (ಅ .12) ಹೊತ್ತಿಗೆ ಬೆಂಗಳೂರು ಬರಲಿದ್ದಾರೆಂದು ಅವರ ಆಪ್ತ ಸಹಾಯಕರು ಹೇಳಿಕೆ ನೀಡಿದ್ದರು. ಚೆಲುವರಾಯ ಸ್ವಾಮಿ ಅವರು ಮಾತ್ರ ಒಮ್ಮೆ ಅಶ್ವಥ್ ಅವರನ್ನು ಸಂಪರ್ಕಿಸಿದ್ದರೂ, ಅವರ ಇರುವಿಕೆ ಬಗ್ಗೆ ಯಾವುದೆ ಸ್ಪಷ್ಟ ಚಿತ್ರಣಸಿಕ್ಕಿಲ್ಲ.

ಕಳೆದ ಗುರುವಾರ ಮಹಾಲಯ ಅಮಾವಾಸ್ಯೆ ಪೂಜೆಯ ನಂತರ ತಮ್ಮ ಕ್ಷೇತ್ರದಿಂದ ನಾಪತ್ತೆಯಾಗಿರುವ ಅಶ್ವಥ್ ಇದುವರೆಗೂ ಪತ್ತೆಯಾಗಿಲ್ಲ. ಅಶ್ವಥ್ ಆಪರೇಶನ್ ಕಮಲಕ್ಕೆ ಬಲಿಯಾಗಿದ್ದಾರೆಂದು ಹೇಳಲಾಗುತ್ತಿತ್ತು. ಅ.11ರಂದು ಬಿಜೆಪಿ ಶಾಸಕರ ಜೊತೆ ಅಶ್ವಥ್ ಅಸೆಂಬ್ಲಿಯಲ್ಲಿ ಪ್ರತ್ಯಕ್ಷ ವಾಗಬಹುದೆಂದು ನಿರೀಕ್ಷಿಸಲಾಗುತ್ತಿತ್ತು. ಈ ನಡುವೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಶಾಸಕ ಅಶ್ವಥ್ ಅವರನ್ನು ಹುಡುಕಿ ಕೊಡುವಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಪಕ್ಷಗಳಂತೆ ಜೆಡಿಎಸ್ ಕೂಡಾ ತನ್ನ ವಜ್ರದಂತಿರುವ 28 ಶಾಸಕರಿಗೆ ವಿಪ್ ನೀಡಿತ್ತು. ಆದರೆ, ಸಂಪರ್ಕ ಕಡಿದುಕೊಂಡಿರುವ ಅಶ್ವಥ್ , ಅ.14 ರಂದು ಸದನಕ್ಕೆ ಹಾಜರಾಗಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಹಾಜರಾಗುವ ನಿರೀಕ್ಷೆ ಹೊಂದಲಾಗಿದೆ. ಆದರೆ, ಮತ ಯಾರ ಪರ ಹಾಕುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಇದೇ ರೀತಿ ಬಿಜೆಪಿಯ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ ಅವರ ಮನದ ಇಂಗಿತ ಇನ್ನೂ ಹೊರಬಿದ್ದಿಲ್ಲ. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಇದು ನಿರ್ಣಾಯಕವಾಗುವ ಎಲ್ಲಾ ಸಾಧ್ಯತೆಗಳಿವೆ.ಈ ಮಧ್ಯೆ ಅನರ್ಹಗೊಂಡ ಶಾಸಕರ ಸದಸ್ಯತ್ವ ಕುರಿತ ವಿಚಾರಣೆಯ ತೀರ್ಪನ್ನು ಕಾಯ್ದಿರಿಸಿರುವ ಹೈಕೋರ್ಟ್, ಅ.18 ರ ಬೆಳಗ್ಗೆ 10.30 ತೀರ್ಪು ನೀಡುವುದಾಗಿ ಪ್ರಕಟಿಸಿದೆ.


ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X