ಹೈಕೋರ್ಟ್ ತೀರ್ಪಿನ ನಂತರ ಏನಾಗಬಹುದು

ನಿಯಾಮಾವಳಿ ಪ್ರಕಾರ ತಮಗೆ ಷೋಕಾಸ್ ನೋಟಿಸ್ ಜಾರಿಯಾದ ನಂತರ ಉತ್ತರಿಸಲು 7 ದಿನ ಕಾಲಾವಕಾಶ ನೀಡಬೇಕು. ಆದರೆ, ಸ್ಪೀಕರ್ ಮೂರು ದಿನ ಮಾತ್ರ ಕಾಲಾವಕಾಶ ನೀಡಿದ್ದರು. ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡರೂ ಕೇಳದೆ, ಅ.10 ರಂದು ಸಂಜೆ ಐದು ಗಂಟೆಯೊಳಗೆ ಉತ್ತರ ನೀಡುವಂತೆ ಹೇಳಿ, ಮೂರುಗಂಟೆ ಸುಮಾರಿಗೆ ವಿಚಾರಣೆ ಆರಂಭಿಸಿ ಮುಗಿಸಿದ್ದಾರೆ. ಸ್ಪೀಕರ್ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ವಕೀಲ ಪಿಪಿ ರಾವ್ ವಾದಿಸಿದರು.
ಶಾಸಕರ ಅಹವಾಲು ಆಲಿಸಿದ ನಂತರವೇ ಸ್ಪೀಕರ್ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಪರ ವಕೀಲ ಸೋಲಿ ಸೊರಾಬ್ಜಿ ಹೇಳಿದ್ದಾರೆ. ಇಂದು ಹೈಕೋರ್ಟ್ ನೀಡುವ ತೀರ್ಪನ್ನು ಅನುಸರಿಸಿ ಕೇಂದ್ರ ಸರ್ಕಾರ ಕೂಡಾ ತನ್ನ ಮುಂದಿನ ನಡೆಯನ್ನು ಇಡುವ ಸಂಭವವಿದೆ. ಇಂದು ಸಂಜೆ ಕಾಂಗ್ರೆಸ್ ಕೋರ್ ಕಮಿಟಿ ಸಭೆ ನಿಗದಿಯಾಗಿದೆ.
ಕೋರ್ಟ್ ತೀರ್ಪಿನ ನಂತರ ಏನಾಗಬಹುದು?:
ಸ್ಪೀಕರ್ ತೀರ್ಪುಗೆ ತಡೆಯಾಜ್ಞೆ ನೀಡಿದರೆ, ಮತ್ತೆ ಬಹುಮತ ಸಾಬೀತಿಗೆ ರಾಜ್ಯಪಾಲರು ಸೂಚಿಸಬಹುದು.ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಬಹುದು. ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದರೂ ಈ ಪ್ರಕ್ರಿಯೆಗೆ ಅವಕಾಶ ನೀಡಬಹುದು.
ಸ್ಪೀಕರ್ ಕ್ರಮವನ್ನು ಪುರಸ್ಕರಿಸಿದರೆ, ಅನರ್ಹಗೊಂಡ ಶಾಸಕರು 6 ವರ್ಷಗಳ ಕಾಲ ಯಾವುದೆ ಚುನಾವಣೆ ಸ್ಪರ್ಧಿಸುವಂತಿಲ್ಲ. ರಾಷ್ಟ್ರಪತಿ ಆಳ್ವಿಕೆ ಹೇರದಿದ್ದಲ್ಲಿ ಈ ಕ್ಷೇತ್ರಗಳಲ್ಲಿ 6 ತಿಂಗಳಲ್ಲಿ ಮರು ಚುನಾವಣೆ ನಡೆಸಬೇಕಾಗುತ್ತದೆ. ಚುನಾವಣೆ ಫಲಿತಾಂಶದ ನಂತರ ಮತ್ತೆ ಬಹುಮತ ಸಾಬೀತುಪಡಿಸಬೇಕು.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications