ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿದರಿ ಕಂಡ್ರೆ ವಿಪಕ್ಷಗಳಿಗ್ಯಾಕೆ ಉರಿ ಉರಿ

By Mahesh
|
Google Oneindia Kannada News

ಬೆಂಗಳೂರು, ಅ.11:ಸ್ಪೀಕರ್ ಅವರು ನಿಯಮ ಬಾಹಿರವಾಗಿ ನಡೆದುಕೊಂಡಿದ್ದಲ್ಲದೆ, ಶಸ್ತ್ರಧಾರಿಯಾಗಿ ಶಂಕರ್ ಬಿದರಿಯನ್ನು ಅಧಿವೇಶನಕ್ಕೆ ಕರೆಸಿಕೊಂಡಿದ್ದು ತಪ್ಪು. ಪೊಲೀಸರನ್ನು ಗೂಂಡಾಗಳಂತೆ ಬಳಸಿಕೊಂಡು ಸಂವಿಧಾನ ಬಾಹಿರವಾಗಿ ನಡೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಪಕ್ಷೇತರ ಶಾಸಕರನ್ನು ಅನರ್ಹ ಮಾಡುವ ಯಾವುದೇ ಅಧಿಕಾರ ಸ್ಪೀಕರ್ ಅವರಿಗೆ ಇಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಿದ ಕ್ರಮವನ್ನು ಬಲವಾಗಿ ಖಂಡಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಪ್ರಜಾಪ್ರಭುತ್ವ ವಿರೋಧಿ ಕ್ರಮ ಕೈಗೊಂಡಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಯಡಿಯೂರಪ್ಪ ಒಬ್ಬ ಹಿಟ್ಲರ್ , ಸ್ಪೀಕರ್ ಸಿಎಂ ಕೈಗೊಂಬೆಯಂತೆ ವರ್ತಿಸಿದ್ದಾರೆ. ಧ್ವನಿಮತ ಮೂಲಕ ಬಹುಮತ ಸಾಬೀತು ಎಂದು ಹೇಳಿ ಸದನದಲ್ಲಿ ಗೊಂದಲ ಉಂಟು ಮಾಡಿ ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂದರು.

ಸರ್ಕಾರದ ವಿರುದ್ಧ 100ಕ್ಕೂ ಹೆಚ್ಚು ಶಾಸಕರು ಮತ ಚಲಾಯಿಸಲು ಸಿದ್ಧರಿದ್ದರು. ಆದರೆ, ಸದನದಲ್ಲಿ ಮತದಾನವೂ ನಡೆಯಲಿಲ್ಲ. ಮತ ಎಣಿಕೆಯೂ ನಡೆಯಲಿಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಬೇಜವಾಬ್ದಾರಿ ಸರ್ಕಾರವನ್ನು ಕೂಡಲೇ ವಜಾಮಾಡಬೇಕೆಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.

ಬಿಜೆಪಿ ಶಾಸಕರು ಮತ್ತೆ ರೆಸಾರ್ಟ್ ನತ್ತ : ಬಲಾಬಲ ಪರೀಕ್ಷೆಯಲ್ಲಿ ಗೆದ್ದಿರುವ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರಲ್ಲಿ ಇನ್ನೂ ಆತಂಕ ಮರೆಯಾಗಿಲ್ಲ. ಬೆಳಗ್ಗೆ ವಿಧಾನಸೌಧಕ್ಕೆ ಯಾವ ಯಾವ ವೊಲ್ವೋ ಬಸ್ ಗಳಲ್ಲಿ ಬಂದಿದ್ದರೋ ಅದೇ ಬಸ್ ಗಳನ್ನು ಹತ್ತಿ ಗೋಲ್ಡನ್ ಪಾಮ್ ರೆಸಾರ್ಟ್ ಗೆ ವಾಪಾಸ್ಸಾಗಿದ್ದಾರೆ.

ಒಂದು ವೇಳೆ ರಾಜ್ಯಪಾಲರ ಶಿಫಾರಸ್ಸಿನಂತೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಂಡರೆ ಯಾವ ರೀತಿ ಕಾನೂನು ಹೋರಾಟ ನಡೆಸಬೇಕು. ಹೈಕೋರ್ಟ್ ಮೆಟ್ಟಿಲೇರಿರುವ ಅನರ್ಹ ಶಾಸಕರ ವಿರುದ್ಧ ನಾಳೆ ಯಾವ ರೀತಿ ವಾದ ಮಂಡಿಸಬೇಕು ಎಂಬೆಲ್ಲಾ ವಿಷಯಗಳ ಬಗ್ಗೆ ಗಂಭೀರ ಚಿಂತನೆಗಳನ್ನು ನಡೆಸಲಾಗುತ್ತದೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X