ನ್ಯಾ.ಎಸ್ ಯು ಖಾನ್ ದೇಶಭಕ್ತ : ಶಿವಸೇನೆ

ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯ ಬರೆಯಲಾಗಿದ್ದು, ನ್ಯಾ.ಖಾನ್ ಈ ತೀರ್ಪು ಬರೆಯುವಾಗ ವಿದೇಯತೆ ಪ್ರದರ್ಶಿಸಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, ಅವರು ಅನುಭವಿಸಿರುಬಹುದಾದ ಮಾನಸಿಕ ಒತ್ತಡ ಊಹೆಗೆ ಮೀರಿದ್ದಾಗಿದೆ. ಖಾನ್ ಅವರ ದೇಶಪ್ರೇಮ ಅವರ ಧರ್ಮವನ್ನು ಮೀರಿ ನಿಂತಿದೆ. ವಿವಾದಾತ್ಮಕ ಕಟ್ಟಡ ರಾಮನ ಮಂದಿರದ ಮೇಲೆ ನಿಂತಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಬ್ರಿಟಿಷರು ಒಡೆದು ಆಳುವ ನೀತಿಯನ್ನು ರೂಢಿಸಿಕೊಂಡಿದ್ದರು. ಇದೇ ವಿಭಜಕ ಮನೋಭಾವದ ಶಕ್ತಿಗಳು ಇಂದಿಗೂ ಇಲ್ಲಿವೆ. ಮುಲಾಯಂ ಸಿಂಗ್ ಯಾದವ್, ರಾಂವಿಲಾಸ್ ಪಾಸ್ವಾನ್ ಅವರಂತಹ ನಾಯಕರು ಹಿಂದೂ ಮತ್ತು ಮುಸ್ಲಿಮರ ಶಾಂತಿ ಸಹಬಾಳ್ವೆಯನ್ನು ಬಯಸುವುದಿಲ್ಲ. ಎರಡೂ ಸಮುದಾಯದ ನಡುವೆ ಬಿಕ್ಕಟ್ಟು ನೆಲೆಸಿದರಷ್ಟೇ ತಮ್ಮ ರಾಜಕೀಯ ಉದ್ದೇಶ ಈಡೇರುತ್ತದೆ ಎಂಬುದು ಅವರ ನಂಬಿಕೆ ಎಂದು ಶಿವಸೇನೆ ದೂರಿದೆ.
ಇನ್ನೊದಡೆ ಅಯೋಧ್ಯೆ ತೀರ್ಪಿನ ಮೂವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಧರ್ಮವೀರ್ ಶರ್ಮಾ ಅವರನ್ನು ಸನ್ಮಾಸಲು ಹಿಂದು ಸಂಘಟನೆಗಳು ಹಾಗೂ ರಾಮಜನ್ಮಭೂಮಿ ಟ್ರಸ್ಟ್ ನಿರ್ಧರಿಸಿದೆ. ಇತರ ಇಬ್ಬರು ನ್ಯಾಯಮೂರ್ತಿಗಳಾದ ಸುಧೀರ್ ಅಗರವಾಲ್ ಮತ್ತು ಎಸ್ ಯು ಖಾನ್ ಅವರು ಸೇವೆಯಿಂದ ನಿವೃತ್ತಿಯಾದ ನಂತರ ಸನ್ಮಾನಿಸುವುದಾಗಿ ಟ್ರಸ್ಟ್ ಹೇಳಿದೆ.












Click it and Unblock the Notifications