ನನ್ನ ರಥಯಾತ್ರೆ ಸಾರ್ಥಕವಾಯಿತು : ಅಡ್ವಾಣಿ
ನವದೆಹಲಿ,
ಅ. 5 : ಸರಯೂ ತಟದಲ್ಲಿನ ಕಟ್ಟದ ಹೊರಗೆ ಮುಸ್ಲಿಂ ಬಾಂಧವರು ಮಸೀದಿ ನಿರ್ಮಿಸಬಹುದೆನ್ನುವ ಗಡ್ಕರಿ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಎರಡು ದಶಕಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ನಾನು ಸೋಮನಾಥಪುರದಿಂದ ಆರಂಭಿಸಿದ ರಥಯಾತ್ರೆ ಸಾರ್ಥಕವಾಯಿತೆನ್ನುವ ಸಂತೃಪ್ತಿ ನನಗಿದೆಯೆಂದು ಬಿಜೆಪಿ ವರಿಷ್ಠ ಎಲ್ ಕೆ ಅಡ್ವಾಣಿ ಹೇಳಿಕೆ ನೀಡಿದ್ದಾರೆ. id="toptextpromo">ವಾಸ್ತವಾಗಿ
1949 ರಲ್ಲೇ ಅಯೋಧ್ಯಾ ಚಳುವಳಿ ಆರಂಭವಾಗಿದ್ದರೂ, 1989 ರ ವರೆಗೆ ಭಾರತೀಯ ಜನತಾ ಪಕ್ಷ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. ವಿವಾದಕ್ಕೆ ಆಸ್ಪದ ನೀಡದೆ ಎಚ್ಚರಿಕೆಯಿಂದ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅಡ್ವಾಣಿ, ರಾಮನ ಜನ್ಮಭೂಮಿ ಎಂದು ನಂಬಿರುವ ಸ್ಥಳದಲ್ಲಿ ಮಂದಿರ ನಿರ್ಮಾಣವಾಗಬೇಕೆನ್ನುವುದು ಬಹುಸಂಖ್ಯಾತರ ಅಭಿಲಾಷೆ ಎಂದು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಲಹಾಬಾದ್
ಕೋರ್ಟ್ ನೀಡಿದ ತೀರ್ಪು ಕೇವಲ ನ್ಯಾಯಾಲಯದ ತೀರ್ಪಲ್ಲ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೂ ಜತೆಗೂಡಿ ಮಾತುಕತೆ ಮೂಲಕ ಮಂದಿರ ನಿರ್ಮಾಣಕ್ಕೆ ಒಪ್ಪಂದವೊಂದನ್ನು ಮಾಡಿಕೊಳ್ಳಬೇಕು. ಇದು ಬಿಜೆಪಿ ಮತ್ತು ಸಂಘ ಪರಿವಾರದ ಬಯಕೆ. ಕೋರ್ಟಿನ ತೀರ್ಪು ಎರಡೂ ಸಮುದಾಯದ ನಡುವಣ ಸಂಬಂಧಕ್ಕೆ ಉತ್ತಮ ಬೆಸುಗೆಯಾಗಲೆಂದು ಅಡ್ವಾಣಿ ಹೇಳಿಕೆ ನೀಡಿದ್ದಾರೆ.











Click it and Unblock the Notifications