ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‌ಕ್ಯಾಂಡಿಸೆಂಟ್ ಬಲ್ಬ್‌ಗೆ ಗುಡ್ ಬೈ ಹೇಳಿ

By Rajendra
|
Google Oneindia Kannada News

Shobha Karandlaje
ಬೆಂಗಳೂರು, ಅ.2: ಗೃಹ ಬಳಕೆಗಾಗಿ ಹಾಲಿ ಬಳಸುತ್ತಿರುವ ಇನ್‌ಕ್ಯಾಂಡಿಸೆಂಟ್ ಲ್ಯಾಂಪುಗಳ ಬದಲಾಗಿ ಕಾಂಪ್ಯಾಕ್ಟ್ ಫ್ಲೋರೊಸೆಂಟ್ ಲ್ಯಾಂಪುಗಳನ್ನು (ಸಿ.ಎಫ್.ಎಲ್) ಬಳಸುವುದರಿಂದ ವಿದ್ಯುತ್ ಬಳಕೆಯಲ್ಲಿ ಉಳಿತಾಯ ಮಾಡಬಹುದಾಗಿದೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕೆಂದು ಇಂಧನ ಖಾತೆ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಅವರು ಇಂದು ವಿಧಾನ ಸೌಧದ ತಮ್ಮ ಕಛೇರಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅಕ್ಟೋಬರ್ 4 ರಂದು ಗುಲ್ಬರ್ಗಾ ನಗರದ ಕೊಳಚೆ ಪ್ರದೇಶದ ಕೆಲವು ಫಲಾನುಭವಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಕಾಂಪ್ಯಾಕ್ಟ್ ಫ್ಲೋರೊಸೆಂಟ್ ಲ್ಯಾಂಪ್‌ಗಳನ್ನು ವಿತರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿದ್ದು ಭವಿಷ್ಯದಲ್ಲಿ ಸಂಪನ್ಮೂಲದ ಸಮರ್ಥ ಬಳಕೆಮಾಡಬೇಕಾಗಿದ್ದು ವಿದ್ಯುತ್ ಉಳಿತಾಯ ಮಾಡಬೇಕಾಗಿದೆ. ಈ ಬಲ್ಪ್‌ಗಳನ್ನು ಉಪಯೋಗಿಸುವುದರಿಂದ ಪ್ರತಿದಿನ ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಉಳಿತಾಯ ಮಾಡಬಹುದು. ಸರ್ಕಾರಿ ಕಛೇರಿಗಳು, ಸರ್ಕಾರದ ಅನುದಾನಿತ ಸಂಸ್ಥೆಗಳು, ಮಂಡಳಿಗಳು ಹಾಗೂ ನಿಗಮಗಳು ಸೇರಿದಂತೆ ಇತರೆಡೆಗಳೆಲ್ಲೂ ಈ ಬಲ್ಪ್‌ಗಳ ಬಳಕೆ ಮಾಡುವಂತೆ ಚಿಂತಿಸಲಾಗಿದೆ ಎಂದರು.

ಹಾಲಿ ಪ್ರತಿದಿನ ಒಂದು ಸಾವಿರ ಮೆ.ವ್ಯಾಟ್ ವಿದ್ಯುತ್‌ಚ್ಛಕ್ತಿ ಕೊರತೆ ಇದೆ. ನಮಗೆ ಪ್ರತಿದಿನ 124 ಮಿಲಿಯನ್ ಯೂನಿಟ್ ಬಳಕೆಗೆ ಅಗತ್ಯವಿದೆ. ಕಳೆದ ಅಕ್ಟೋಬರ್ ನಿಂದ ವಿದ್ಯುತ್ ಖರೀದಿಸಲಾಗುತ್ತಿದ್ದು ಪ್ರತಿ ತಿಂಗಳು 300 ಕೋಟಿ ರೂ. ಹಣವನ್ನು ವಿದ್ಯುತ್ ಖರೀದಿಗಾಗಿ ವಿನಿಯೋಗಿಸಲಾಗುತ್ತಿದೆ. ಆದ್ದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ವಿದ್ಯುತ್ ಬಳಕೆಯಲ್ಲಿ ಉಳಿತಾಯ ಮಾಡುವ ಕಡೆಗೂ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X