ಶಾಂತಿ ಕಾಪಾಡಿ ಎಂದ ಮನಮೋಹನ್ ಸಿಂಗ್

ಅಲಹಾಬಾದ್ ಹೈಕೋರ್ಟ್‌ನ ವಿಶೇಷ ನ್ಯಾಯಪೀಠವು ರಾಮ ಜನ್ಮಭೂಮಿ-ಬಾಬರಿ ಮಸೀದಿ ಮಾಲೀಕತ್ವದ ತೀರ್ಪು ನೀಡಿರುವುದು ನಿಮಗೆ ತಿಳಿದಿದೆ. ವಿವಿಧ ವರ್ಗಗಳ ಜನರು ವಿಭಿನ್ನ ನಿಲುವು ಹೊಂದಿದ್ದ ಭಾವನಾತ್ಮಕ ವಿಷಯಕ್ಕೆ ಸಂಬಂಧಿಸಿದ ದೀರ್ಘ ಕಾಲೀನ ನ್ಯಾಯಾಂಗ ಪ್ರಕ್ರಿಯೆಯ ಬಳಿಕ ಬಂದ ಪ್ರಮುಖ ತೀರ್ಪು ಇದಾಗಿದೆ.
ಮೂವರು ಗೌರವಾನ್ವಿತ ನ್ಯಾಯಮೂರ್ತಿಗಳು ನೀಡಿರುವ ತೀರ್ಪನ್ನು ಜಾಗೃತೆಯಿಂದ ಪರಿಶೀಲಿಸಬೇಕಾಗಿದೆ. ವಿಷಯಕ್ಕೆ ಸಂಬಂಧಿಸಿ ಮೂರು ತಿಂಗಳ ಕಾಲ ಯಥಾಸ್ಥಿತಿಯನ್ನು ಕಾಪಾಡುವಂತೆ ಹೈಕೋರ್ಟ್ ಸ್ವತ: ನಿರ್ದೇಶಿಸಿದೆ. ವಿಷಯಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಅವಕಾಶವನ್ನೂ ಹೈಕೋರ್ಟ್ ನೀಡಿದೆ.
ಭಾರತೀಯ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲ ವರ್ಗಗಳೂ ಎಲ್ಲ ಧರ್ಮಗಳ ನಂಬಿಕೆಗಳಿಗೆ ಗೌರವ ಕೊಟ್ಟು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಬದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ. ದೇಶದ ಎಲ್ಲ ಜನರೂ ತೀರ್ಪನ್ನು ಗೌರವಿಸುತ್ತಾರೆ ಎನ್ನುವುದು ತಮ್ಮ ಭರವಸೆ ಎಂದು ಅವರು ಹೇಳಿದ್ದಾರೆ.












Click it and Unblock the Notifications