ಮಂದಿರಕ್ಕೂ, ಮಸೀದಿಗೂ ಜಯ, ಪೇಜಾವರ ಶ್ರೀ

ತೀರ್ಪು ಹೊರಬಿದ್ದ ನಂತರ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ನಾನು ಅನೇಕ ದಿನಗಳಿಂದಲೂ ವಿವಾದಿತ ಪ್ರದೇಶ ಅಯೋಧ್ಯೆಯಲ್ಲಿ ಮಂದಿರವೂ ಇರಲಿ, ಮಸೀದಿಯೂ ಇರಲಿ ಎಂದು ಪ್ರತಿಪಾದಿಸುತ್ತಾ ಬಂದಿದ್ದೇನೆ. ಇದೀಗ ನ್ಯಾಯಾಲಯ ಎರಡು ಭಾಗವನ್ನು ಹಿಂದುಗಳಿಗೆ ಮತ್ತು ಒಂದು ಭಾಗವನ್ನು ಮುಸ್ಲಿಮರಿಗೆ ನೀಡಿದೆ. ಇದೊಂದು ಉತ್ತಮವಾದ ತೀರ್ಮಾನ ಎಂದು ಶ್ರೀಗಳು ಹೇಳಿದರು.
ರಾಮಜನ್ಮಭೂಮಿಯಲ್ಲಿ ಮುಸ್ಲಿಮರಿಗೆ ಜಾಗ ನೀಡುವುದನ್ನು ಸಂತರ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಮಸೀದಿ ನಿರ್ಮಿಸಿದರೆ, ಘರ್ಷಣೆ ಉಂಟಾಗುವ ಸಾಧ್ಯತೆ ಇದ್ದು, ಅಯೋಧ್ಯೆ ರಾಮನ ಸ್ಥಳ. ಹೀಗಾಗಿ ಆ ಜಾಗ ಹಿಂದೂಗಳಿಗೆ ಸೇರಬೇಕು ಎನ್ನುವುದು ಸಂತರ ಅಭಿಪ್ರಾಯವಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.
ತೀರ್ಪಿನ ವಿರುದ್ಧ ಸುನ್ನಿ ಬೋರ್ಡ್ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ. ಈ ವಿಷಯವನ್ನು ಸಂತರ ಹಾಗೂ ಸುನ್ನಿ ವಕ್ಫ್ ಬೋರ್ಡ್ ಮುಖಂಡರೊಂದಿಗೆ ಕೂತು ಚರ್ಚಿಸಿ ಸುಪ್ರೀಂಕೋರ್ಟ್ ಗೆ ತೆರೆಳದಂತೆ ಮನವಿ ಮಾಡಿಕೊಳ್ಳಲಾಗುವುದು. ನ್ಯಾಯಾಲಯದಿಂದ ಹೊರಗೆ ಈ ವಿಷಯವನ್ನು ಬಗೆಹರಿಸಿಕೊಳ್ಳಲು ಮನವೊಲಿಸುವುದಾಗಿ ಅವರು ಹೇಳಿದರು.
ಮೋಹನ್ ಭಾಗ್ವತ್ ಹೇಳಿಕೆ : ಇದು ಯಾರೊಬ್ಬರ ಗೆಲುವು ಅಲ್ಲ. ಯಾರೊಬ್ಬರ ಸೋಲು ಅಲ್ಲ ಎಂದು ಆರ್ ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಅವರು ತೀರ್ಪುಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications