ಬೆಂಗಳೂರು : ಮೆಟ್ರೋ ನಿಲ್ದಾಣಗಳಿಗೆ ಗಣ್ಯರ ಹೆಸರು

ಎಫ್ ಕೆಸಿಸಿ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಮೆಟ್ರೊ ರೈಲು ನಿಗಮ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ಅವರು, ಮೊದಲ ಹಂತದ ಬೈಯಪ್ಪನಹಳ್ಳಿ-ಎಂಜಿ ರಸ್ತೆ ಮೆಟ್ರೊ ರೈಲು ಮಾರ್ಗ ಡಿಸೆಂಬರ್ ಒಳಗೆ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧವಾಗಲಿದೆ ಎಂದರು.
ಮೊದಲ ಹಂತದ 7 ಏಳು ಕಿಮೀ ಮಾರ್ಗದ ಬಹುತೇಕ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ನಿಗದಿತ ಅವಧಿಯೊಳಗೆ ಬೈಯಪ್ಪನಹಳ್ಳಿ-ಎಂಜಿ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳುವ ವಿಶ್ವಾಸವಿದೆ. ಸ್ಟೇಷನ್ ಮತ್ತು ಸಿಗ್ನಲ್ ಅಳವಡಿಸುವುದು ಸೇರಿದಂತೆ ಕೆಲವೊಂದು ಕೆಲಸಗಳು ಬಾಕಿ ಉಳಿದಿವೆ.
ಮೆಟ್ರೊ ನಿಲ್ದಾಣಗಳು ರೈಲ್ವೆ ನಿಲ್ದಾಣಗಳಂತಿರುವುದಿಲ್ಲ. ಹೀಗಾಗಿ, ಅವುಗಳ ನಿರ್ಮಾಣಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ. ಡಿಸೆಂಬರ್ 3ನೇ ವಾರದೊಳಗೆ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಸಕಲ ಸಿದ್ಧತೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಮೆಟ್ರೊ ಸ್ಟೇಷನ್‌ಗಳಲ್ಲಿ ಮಾಲ್ ಗಳಿಗೆ ಅವಕಾಶವಿರುವುದಿಲ್ಲ. ಸಣ್ಣ ಬುಕ್ ಸ್ಟಾಲ್, ಪಾನೀಯ ಅಥವಾ ತಿಂಡಿ-ತಿನಿಸುಗಳ ಮಳಿಗೆಗಳಿಗಷ್ಟೇ ಸ್ಥಳಾವಕಾಶವಿರುತ್ತದೆ. ಹೀಗಿರುವಾಗ, ಮೆಟ್ರೊ ಸ್ಟೇಷನ್‌ಗಳಲ್ಲಿ ದೊಡ್ಡ ಮಾಲ್ ಗಳು ಕಾಣಿಸಿಕೊಳ್ಳಲಿವೆ ಎಂಬುದು ತಪ್ಪು ಕಲ್ಪನೆ. ಮೆಟ್ರೊದಿಂದ ಆಸ್ತಿ ಕಳೆದುಕೊಂಡಿರುವ ಮಾಲೀಕರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಲಾಗಿದೆ ಎಂದರು.












Click it and Unblock the Notifications