ಕೆಐಎಡಿಬಿ ಹಗರಣ:ಕಟ್ಟಾ ಮೇಲೆ ತೂಗುಗತ್ತಿ?

ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೆಐಎಡಿಬಿ ಭೂ ವ್ಯವಹಾರದಲ್ಲಿ ನೂರಾರು ಕೋಟಿ ರುಗಳ ಭಾರೀ ಅಕ್ರಮ ನಡೆಸಿರುವುದು ಬಹಿರಂಗವಾಗಿದ್ದು, ಸಚಿವ ಕಟ್ಟಾ ಹಾಗೂ ಜಗದೀಶ್ ಅವರ ಮೇಲೆ ವರ್ಷದ ಹಿಂದೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದರೂ, ರಾಜಕೀಯ ಪ್ರಭಾವಕ್ಕೆ ಒಳಗಾದ ಪೊಲೀಸರು ಕೇಸ್ ಮುಚ್ಚಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕೆಐಎಡಿಬಿಎ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ಅಧಿಕೃತ ದಾಖಲೆ ಲಭ್ಯವಾಗಿದೆ. ಈ ಹಗರಣದಲ್ಲಿ 107 ಕೋಟಿ ರೂ.ಗೂ ಅಧಿಕ ಅಕ್ರಮವಾಗಿದ್ದು, ಈ ಸಂಬಂಧ ಸಚಿವ ಕಟ್ಟಾ ಹಾಗೂ ಅವರ ಪುತ್ರನ ವಿರುದ್ಧ ಲೋಕಾ ಯುಕ್ತರು ನೋಟಿಸ್ ಜಾರಿ ಮಾಡುವ ಸಂಭವವಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರ್ಥಿಕ ವಲಯಕ್ಕಾಗಿ ಜಮೀನು ನೀಡಿದವರಿಗೆ ಕೆಐಎಡಿಬಿಯಿಂದ ನೀಡಲಾಗುವ ಪರಿಹಾರದ ಹಣ ಕಟ್ಟಾ ಅವರ ಪುತ್ರನ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಹೇಳಲಾಗುತ್ತಿದ್ದು, ಲೋಕಾಯುಕ್ತರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಜಿಸಿ ಅನಿಲ್ ಕುಮಾರ್, ರಾಮಕೃಷ್ಣ ಹಾಗೂ ಚಿಕ್ಕಬೆಟ್ಟಯ್ಯ ಎಂಬ ಮೂವರು ಕೆಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.












Click it and Unblock the Notifications