ಲೇಡಿ ಖೈದಾ ಆಫಿಯಾಗೆ 86 ವರ್ಷ ಜೈಲು
ನ್ಯೂಯಾರ್ಕ್,
ಸೆ. 24 : ಅಪ್ಘಾನಿಸ್ತಾನದಲ್ಲಿ ಅಮೆರಿಕದ ಅಧಿಕಾರಿಗಳು ಹಾಗೂ ಸೇನಾ ಯೋಧರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದ ಪಾಕಿಸ್ತಾನಿ ಮಹಿಳಾ ವಿಜ್ಞಾನಿಯೊಬ್ಬರಿಗೆ ಅಮೆರಿಕ ನ್ಯಾಯಾಲಯ 86 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. id="toptextpromo"> ಲೇಡಿ ಖೈದಾ ಎಂದೇ ಕುಖ್ಯಾತಿ ಗಳಿಸಿರುವ ಪಾಕಿಸ್ತಾನದ ನ್ಯೊರೋ ಸೈಂಟಿಸ್ಟ್ ಆಫಿಯಾ ಸಿದ್ಧಕಿ(38) ಶಿಕ್ಷೆಗೆ ಒಳಗಾದವರು. 2002ರಲ್ಲಿ ಅಪ್ಘಾನಿಸ್ತಾನದ ಘಜ್ನಿ ಪ್ರದೇಶದಲ್ಲಿ ಅಮೆರಿಕ ಎಫ್ ಬಿಐ ಮತ್ತು ಸೇನಾ ಪಡೆಯ ಯೋಧರ ಮೇಲೆ ಆಫಿಯಾ ಸಿದ್ಧಕಿ ಗುಂಡು ಹಾರಿಸಿ ಅಧಿಕಾರಿಗಳನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ ಆಫಿಯಾ ಅವರನ್ನು ಬಂಧಿಸಿದ್ದ ಅಮೆರಿಕ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ನಂತರ ಅವರನ್ನು ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು.id='are-slot-1' class='oiad oi-axt oiadv'> id='top-searched-articles'>
ಆಫಿಯಾ
ಸಿದ್ಧಕಿಗೆ ಅಮೆರಿಕ ನ್ಯಾಯಾಲಯ ವಿಧಿಸಿರುವ ದೀರ್ಘಕಾಲದ ಶಿಕ್ಷೆಗೆ ಅವರು ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶೇಮ್ ಶೇಮ್ ಅಮೆರಿಕ, ಡೌನ್ ಡೌನ್ ಅಮೆರಿಕ ಎಂಬ ವಿರೋಧಿ ಘೋಷಣೆಗಳು ಆರಂಭವಾಗಿವೆ. ಆದರೆ, ಪಾಕಿಸ್ತಾನಿ ಸರಕಾರ ಮಾತ್ರ ಅಂದು ವಿಜ್ಞಾನಿ ಆಫಿಯಾ ಸಿದ್ಧಕಿ ಮಾಡಿದ್ದ ಕೃತ್ಯವನ್ನು ಖಂಡಿಸಿತ್ತು. ಜೀವ ಕೆಲಸವನ್ನು ಯಾರೇ ಮಾಡಿದರೂ ಅದಕ್ಕೆ ಕ್ಷಮೆ ಎಂಬುದೇ ಇಲ್ಲ ಎಂದು ಸ್ಪಷ್ಟಪಡಿಸಿದೆ.











Click it and Unblock the Notifications