ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾ ಕೊಲೆ ಪ್ರಕರಣ ತೀರ್ಪುಮುಂದೂಡಿಕೆ

By Mahesh
|
Google Oneindia Kannada News

Prathibha Murder Case Verdict deferred till Sept 27
ಬೆಂಗಳೂರು, ಸೆ.17: ಬಿಪಿಒ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣದ ತೀರ್ಪನ್ನು ಕಾಯ್ದಿರಿಸಿರುವ ಅವರು 11 ನೇ ತ್ವರಿತ ನ್ಯಾಯಾಲಯ ವಿಚಾರಣೆಯನ್ನು ಸೆ.27 ಕ್ಕೆ ಮುಂದೂಡಿದೆ. ಪ್ರತಿಭಾಳ ದುರಂತ ಸಾವಿನಿಂದ ನೊಂದಿರುವ ಆಕೆಯ ತಾಯಿ ಗೌರಮ್ಮ ಅವರ ಕಣ್ಣೀರಿಗೆ ಇನ್ನೂ ನ್ಯಾಯ ಸಿಕ್ಕಬೇಕಾಗಿದೆ.

ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿ ಶಿವಕುಮಾರನನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಐದಾರು ನಿಮಿಷ ದಲ್ಲೇಕೋರ್ಟ್ ಕಲಾಪ ಮುಗಿಯಿತು. ಈ ಪ್ರಕರಣದಲ್ಲಿ ಇನ್ನಷ್ಟು ಸ್ಪಷ್ಟೀಕರಣ ಬೇಕ್ಕಿದೆ ಎಂದು ಹೇಳಿದ ನ್ಯಾಯಾಧೀಶ ಬಿ.ಬಿ.ಗುದಲಿ ಅವರು ಸೆ.27ಕ್ಕೆ ತೀರ್ಪು ನೀಡುವುದಾಗಿ ಹೇಳಿದರು.

ಪ್ರತಿಭಾ ಕೇಸ್ ಹಿಸ್ಟರಿ: ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಎಚ್‌ಪಿ ಗ್ಲೋಬಲ್ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಪ್ರತಿಭಾ ಶ್ರೀಕಂಠಯ್ಯ ಅವರನ್ನು 2005 ಡಿ.13 ರಂದು ರಾತ್ರಿ ಎಸ್‌ಎರ್‌ಎಸ್ ಕ್ಯಾಬ್ ಡ್ರೈವರ್ ಶಿವಕುಮಾರ ಅತ್ಯಾಚಾರ ಎಸೆಗಿ ಕೊಲೆ ಮಾಡಿದ್ದನು.

ಮರುದಿನ ಕನಕಪುರ ರಸ್ತೆಯ ಪೊದೆಯೊಂದರಲ್ಲಿ ಪ್ರತಿಭಾ ಶವ ಪತ್ತೆಯಾಗಿತ್ತು. ಈ ಪ್ರಕರಣ ಇಡೀ ದೇಶದ ಐಟಿ ಕ್ಷೇತ್ರವನ್ನು ತಲ್ಲಣಗೊಳಿಸಿತ್ತು. ಎಂದಿನಂತೆ ಪ್ರತಿಭಾಳನ್ನು ಕಾಲ್‌ಸೆಂಟರ್‌ಗೆ ಕರೆದುಕೊಂಡು ಹೋಗಲು ಬರುತ್ತಿದ್ದ ಜಗದೀಶ ಬದಲಿಗೆ ಶಿವಕುಮಾರ ಎಂಬುವನು ಬಂದಿದ್ದನು. ಶಿವಕುಮಾರಗೆ ಜ್ವರವಿದೆ ಎಂದು ನಂಬಿಸಿ ಆಕೆಯನ್ನು ಕುಮಾರಸ್ವಾಮಿ ಲೇಔಟ್ ಬಳಿಯ ಅಂಜನಾಪುರದ ನಿರ್ಜನ ಬಡಾವಣೆಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಬೆದರಿಸಿ ಅತ್ಯಾಚಾರ ಎಸೆಗಿದ್ದನು.

ನಂತರ ತನ್ನ ವಿರುದ್ದ ದೂರು ನೀಡಬಹುದೆಂದು ಭಾವಿಸಿ ಆಕೆಯನ್ನು ಕೊಲೆ ಮಾಡಿ, ಕನಕಪುರ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಹೋಗಿದ್ದನು. ದಕ್ಷಿಣ ವಿಭಾಗದ ಅಂದಿನ ಡಿಸಿಪಿ ಆಗಿದ್ದ ಅಲೋಕ್‌ಕುಮಾರ್ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ದೇವಯ್ಯ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದರು.

ಪ್ರತಿದಿನ ಕ್ಯಾಬ್ ಓಡಿಸುವ ಜಗದೀಶನನ್ನು ವಿಚಾರಣೆ ಮಾಡಿದಾಗ ಶಿವಕುಮಾರನ ಹೆಸರು ಕೇಳಿ ಬಂದಿತ್ತು. ಆತನನ್ನು ಬಂಧಿಸಿದಾಗ ಅತ್ಯಾಚಾರ ವಿಷಯ ಬೆಳಕಿಗೆ ಬಂದಿತ್ತು ನ್ಯಾಯಾಧೀಶರ ಬದಲಾವಣೆ ಪ್ರಕರಣದ ಸೂಕ್ಷ್ಮತೆಯನ್ನು ಅರಿತಿದ್ದ ಅಂದಿನ ಡಿಸಿಪಿ ಅಲೋಕ್‌ಕುಮಾರ್ ಎರಡು ತಿಂಗಳಲ್ಲಿ ನ್ಯಾಯಾಲಯಕ್ಕೆ ಶಿವಕುಮಾರ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಡಿಎನ್ ಎ ಪರೀಕ್ಷೆ ಮೂಲಕ ಕೂಡಾ ಶಿವಕುಮಾರ ಮೇಲಿನ ಅರೋಪ ದೃಢಪಟ್ಟಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X