ಎರಡು ದಿನದ ಪಾಪುಗೂ ಒಂದು ಟ್ವಿಟ್ಟರ್ ಖಾತೆ

'ಮಗು ಹೆತ್ತದ್ದನ್ನು ಮಾತ್ರ ಟ್ವೀಟ್ ಮಾಡಿಲ್ಲ. ನನ್ನ ಗರ್ಭಾವಸ್ಥೆಯ ಎಲ್ಲಾ ನೋವು ನಲಿವುಗಳನ್ನು ಹಂಚಿಕೊಂಡಿದ್ದೇನೆ. ಬಗೆ ಬಗೆ ಸಲಹೆ ಸೂಚನೆಗಳು ಬಿಟ್ಟಿಯಾಗಿ ಸಿಕ್ಕಿವೆ. ತಜ್ಞ ಪ್ರಸೂತಿ ವೈದ್ಯರ ಸಂಪರ್ಕವನ್ನು ಕೆಲವರು ನೀಡಿದ್ದಾರೆ. ಹಲವರು ನನಗಾಗಿ ಪ್ರಾರ್ಥಿಸಿದ್ದಾರೆ ನನಗೆ ನಿಜಕ್ಕೂ ಇದು ಖುಷಿ ಕೊಟ್ಟಿದೆ' ಎನ್ನುತ್ತಾರೆ ಸಿಮ್ರಾನ್.
ಗುರ್ ಸಿಮ್ರಾನ್ [Gursimran aka @limeice]ಳ ಪತಿ ಸುಮಿತ್ ಗೆ ಕೂಡಾ ಟ್ವಿಟ್ಟರ್ ಹುಚ್ಚು. ಮಗು ಹುಟ್ಟಿದ ತಕ್ಷಣ ಕೈಗೆತ್ತಿಕೊಂಡು ಮುದ್ದಾಡುವ ಮೊದಲು ಮಗುವಿನ ಫೋಟೊ ತೆಗೆದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಸಂತಸಪಟ್ಟಿದ್ದಾನೆ. ದಂಪತಿಗಳಿಗೆ ಶುಭ ಹಾರೈಕೆಯ ಮಹಾಪೂರವೇ ಹರಿದಿದೆ.
ಶ್ವೇತಭವನದಲ್ಲಿ ಹೃದಯಾಘಾತ ಅನುಭವಿಸಿದ ವ್ಯಕ್ತಿಯೊಬ್ಬ ಇತ್ತೀಚೆಗೆ ನೇರವಾಗಿ ಟ್ವೀಟ್ ಮಾಡಿ ಸುದ್ದಿಯಾಗಿದ್ದ. ಹೊಸ ವಿನ್ಯಾಸದಲ್ಲಿ ಬಂದಿರುವ ಟ್ವಿಟ್ಟರ್ ಗೆ 2 ದಿನದ ಮಗು ಇನಾಯತ್ [@babyinayat]ಕೂಡಾ ಹೊಸ ಅತಿಥಿಯಾಗಿ ಸೇರ್ಪಡೆಯಾಗಿರುವುದು ಸಾಮಾಜಿಕ ಜಾಲತಾಣದ ವಿಸ್ತೃತ ಜಾಲ ಹಾಗೂ ಮೋಹಕ್ಕೆ ಸಾಕ್ಷಿ ಎನ್ನಬಹುದು.












Click it and Unblock the Notifications