ತೆರಿಗೆ ಕಟ್ಟದ ಯುವರಾಜ್ ಗೆ ನೋಟಿಸ್
ಚಂಡೀಗಡ,
ಸೆ. 16 : ಐಪಿಎಲ್ ನ ಎರಡು ಆವೃತ್ತಿಗಳಿಂದ ಗಳಿಸಿರುವ ಆದಾಯಕ್ಕೆ 1.15 ಕೋಟಿ ರುಪಾಯಿ ತೆರಿಗೆ ಪಾವತಿಸುವಂತೆ ಕೇಂದ್ರ ಆದಾಯ ಕರ ಇಲಾಖೆ ಕಿಂಗ್ಸ್ ಇಲೆವನ್ ತಂಡದ ಸದಸ್ಯ ಯುವರಾಜ್ ಸಿಂಗ್ ಗೆ ನೋಟಿಸ್ ಕಳಿಸಿದೆ. id="toptextpromo">ಐಪಿಎಲ್
ನ 2ನೇ ಆವೃತ್ತಿಯಲ್ಲಿ ಜಾಹೀರಾತಿನಿಂದ ಬಂದಿರುವ ಆದಾಯಕ್ಕಾಗಿ 1.15ಕೋಟಿ ರುಪಾಯಿ ತೆರಿಗೆ ಪಾವತಿಸುವಂತೆ ಯುವರಾಜ್ ಸಿಂಗ್ ಗೆ ನೋಟಿಸ್ ಕಳಿಸಿದ್ದೇವೆ. ವ್ಯಾಪಾರ ಸಹಾಯಕ ಸೇವೆ ವ್ಯಾಪ್ತಿಯಲ್ಲಿ ಈ ಆದಾಯವನ್ನು ಪರಿಗಣಿಸಲಾಗಿದೆ. ಐಪಿಎಲ್ 2 ಆವೃತ್ತಿಗಳ ಆದಾಯಕ್ಕೆ 96.44 ಲಕ್ಷ ರುಪಾಯಿ, ಟಿವಿ ಶೋ ದಸ್ ಕಾ ದಮ್ ಹಾಗೂ ಕಾರ್ನರ್ ಸ್ಟೋನ್ ಮತ್ತು ರಿತಿ ಸ್ಪೋರ್ಟ್ಸ್ ಪರ ಪ್ರಚಾರ ರಾಯಭಾರಿಯಾಗಿ ಗಳಿಸಿದ ಆದಾಯಕ್ಕೆ 19.53 ಲಕ್ಷ ರುಪಾಯಿ ತೆರಿಗೆ ಪಾವತಿಸಬೇಕಿದೆ ಎಂದು ಇಲಾಖೆಯ ಚಂಡೀಗಡ ವಿಭಾಗದ ಉನ್ನತ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಯುವರಾಜ್
ಸಿಂಗ್ ಐಪಿಎಲ್ ಎರಡೂ ಆವೃತ್ತಿಗಳಿಂದ 8.51 ಕೋಟಿ ರುಪಾಯಿಗಳು, ದಸ್ ಕಾ ದಮ್ ಗೆಲುವಿನಿಂದ 99.99 ಲಕ್ಷ ರುಪಾಯಿ ಮತ್ತು ಜಾಹೀರಾತಿನಿಂದ 65.30 ಲಕ್ಷ ರುಪಾಯಿಗಳನ್ನು ಗಳಿಸಿದ್ದಾರೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.











Click it and Unblock the Notifications