ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಂಗಳೊಳಗೆ ಈ ರಸ್ತೆ ಸಂಚಾರಕ್ಕೆ ಮುಕ್ತ!

By Mahesh
|
Google Oneindia Kannada News

Kadirenahalli underpass, img: skyscrapercity
ಬೆಂಗಳೂರು, ಸೆ.14: ಗೊತ್ತಿದ್ದೋ ಗೊತ್ತಿಲ್ಲದೆಯೋ ಬೆಂಗಳೂರು ದಕ್ಷಿಣ ಭಾಗದ ನಾಗರೀಕರು ಒಮ್ಮೆಯಾದರೂ ಬನಶಂಕರಿ, ಪದ್ಮನಾಭನಗರ, ಕದಿರೇನಹಳ್ಳಿ ಕ್ರಾಸ್ ಹತ್ತಿರ ಸುಳಿದಾಡಿ ಸರ್ಕಾರಕ್ಕೆ ಹಿಡಿ ಶಾಪ ಹಾಕಿ ಗಾಡಿಯನ್ನು ಬದಲೀ ಮಾರ್ಗದತ್ತ ತಿರುಗಿಸಿ ನಡೆಸಿರುತ್ತಾರೆ. ದಾಖಲೆ ಅವಧಿ ತೆಗೆದುಕೊಂಡ ಕದಿರೇನಹಳ್ಳಿ ಅಂಡರ್ ಪಾಸ್ ಶೀಘ್ರವೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಸಿದ್ಧಯ್ಯ ಮತ್ತೊಮ್ಮೆ ಹೇಳಿದ್ದಾರೆ.

ಒಂದು ಕಡೆ ದಿಢೀರ್ ಅಂಡರ್ ಪಾಸ್ (ಮಲ್ಲೇಶ್ವರಂ) ಇನ್ನೊಂದು ಕಡೆ ಅವಧಿ ಮುನ್ನ ಕಾಮಗಾರಿ ಮುಗಿಸಿ ಸೈ ಎನಿಸಿಕೊಂಡ ಅಂಡರ್ ಪಾಸ್ (ಮಡಿವಾಳ) ಇವೆಲ್ಲದರ ನಡುವೆ ಸುಮಾರು 2 ವರ್ಷಗಳಿಂದ ಸತತವಾಗಿ ಕಾಮಗಾರಿ ನಡೆಯುತ್ತಿದ್ದರೂ ಪೂರ್ಣಗೊಳ್ಳದ ಕದಿರೇನಹಳ್ಳಿ ಪಾರ್ಕ್ ಬಳಿಯ ಅಂಡರ್ ಪಾಸ್ ಮುಕ್ತವಾದರೆ ಸಂಚಾರ ದಟ್ಟಣೆ ಕೊಂಚ ಕಮ್ಮಿಯಾಗುತ್ತದೆ ಎಂಬ ನಂಬಿಕೆ ಬಿಬಿಎಂಪಿಗಿದೆ.

ಏಕೆ ಹೀಗೆ ವಿಳಂಬ? :
ಆದರೆ, ಇನ್ನ್ನು 20 ದಿನಗಳ ನಂತರ ಅಂಡರ್ ಪಾಸ್ ನ ಒಂದು ಭಾಗ ಮಾತ್ರ ಸಂಚಾರಕ್ಕೆ ಮುಕ್ತವಾಗಲಿದೆ. ಉತ್ತರಹಳ್ಳಿ ಕಡೆಯಿಂದ ಪದ್ಮನಾಭನಗರ ಕಡೆ ರಸ್ತೆ ಮುಕ್ತವಾಗಲಿದೆ. 28.72 ಕೋಟಿ ವೆಚ್ಚದಲ್ಲಿ 10 ತಿಂಗಳ ಯೋಜನಾ ಅವಧಿ ಯಲ್ಲಿ 356 ಮೀ. ಅಂಡರ್ ಪಾಸ್ ಪೂರ್ಣಬೋರ್ಡ್ ಅಣಕಿಸುತ್ತಿದ್ದರೂ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಗೆ ಎರಡು ವರ್ಷಕ್ಕೂ ಅಧಿಕ ಕಾಲ ಬೇಕಾಯಿತು.

ಈ ಯೋಜನೆಗೆ ಬೇಕಾದ ಭೂ ಪ್ರದೇಶ ವಶಪಡಿಸಿಕೊಳ್ಳುವಿಕೆ, ಮರಗಳನ್ನು ಕಡಿಯುವುದು, ಅಸಮರ್ಪಕ ಒಳಚರಂಡಿ ವ್ಯವಸ್ಥೆ ಇತ್ಯಾದಿ ತೊಂದರೆಗಳನ್ನು ಬಿಬಿಎಂಪಿ ಎದುರಿಸಿತು. ಅವಧಿ ವಿಸ್ತರಣೆ ಗೊಂಡ ಮೇಲೆ ಕಂಟ್ರಾಕ್ಟರ್ ಗಳಿಗೆ 80 ಲಕ್ಷ ರು ದಂಡ ವಿಧಿಸಿ ಬಿಬಿಎಂಪಿ ಸುಮ್ಮನಾಗಿಬಿಟ್ಟಿತು.

ಜನನಿಬಿಡ, ಸಂಚಾರ ದಟ್ಟಣೆ ಹೆಚ್ಚಳವಾಗಿರುವ ಪ್ರದೇಶವಾದ ಟೌನ್ ಹಾಲ್, ಎಸ್ ಜೆಪಿ ರಸ್ತೆಯಲ್ಲಿ ಹೈ ಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಟೌನ್ ಹಾಲ್ ಅಂಡರ್ ಪಾಸ್ ಹಾಗೂ ಪುಟ್ಟೇನಹಳ್ಳಿ ಅಂಡರ್ ಪಾಸ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ತಿಂಗಳೊಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅಯುಕ್ತ ಸಿದ್ದಯ್ಯ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X